ಶಿಕ್ಷಕರ ವೇತನ: ₹359 ಕೋಟಿ ಬಿಡುಗಡೆ

7

ಶಿಕ್ಷಕರ ವೇತನ: ₹359 ಕೋಟಿ ಬಿಡುಗಡೆ

Published:
Updated:
Deccan Herald

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಮತ್ತು ಆದರ್ಶ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಪಾವತಿಗೆ ₹359 ಕೋಟಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದಿಂದ ಸಕಾಲಕ್ಕೆ ಅನುದಾನ ಬಿಡುಗಡೆ ಆಗದ ಕಾರಣ ಈ ಅಭಿಯಾನಗಳ ಯೋಜನೆಗಳಿಗೆ ಒಳಪಡುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಾವಿರಾರು ಶಿಕ್ಷಕರಿಗೆ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ವೇತನ ಬಂದಿರಲಿಲ್ಲ.

ಬಿಸಿಯೂಟಕ್ಕೆ ₹2.90 ಕೋಟಿ: ದಸರಾ ರಜೆ ಅವಧಿಯಾದ ಅಕ್ಟೋಬರ್‌ 9ರಿಂದ 17ರವರೆಗೆ ಹಾಗೂ ವರ್ಷದ 16 ಶನಿವಾರಗಳಂದು ಪರಿಹಾರ ಬೋಧನಾ ತರಗತಿಗಳು ನಡೆಯಲಿವೆ. ಇವುಗಳಿಗೆ ಹಾಜರಾಗುವ 1.07 ಲಕ್ಷ ವಿದ್ಯಾರ್ಥಿಗಳ ಬಿಸಿಯೂಟ ಮತ್ತು ಅಡುಗೆ ಸಿಬ್ಬಂದಿಯ ಗೌರವಧನಕ್ಕಾಗಿ ₹2.90 ಕೋಟಿ ಬಿಡುಗಡೆ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !