ಮಂಗಳವಾರ, ನವೆಂಬರ್ 19, 2019
21 °C

ಕೊಡುಗೆ ಸ್ಮರಿಸದ ಉತ್ತರದ ಜನ: ಗೌಡರ ಬೇಸರ

Published:
Updated:
Prajavani

ಬೆಂಗಳೂರು: ‘ಉತ್ತರ ಕರ್ನಾಟಕ ಭಾಗಕ್ಕೆ ನನ್ನ, ಕುಮಾರಸ್ವಾಮಿ ಕೊಡುಗೆ ಹೆಚ್ಚಿದೆ. ಆದರೆ ಅಲ್ಲಿನ ಜನರು ನಮ್ಮ ಪಕ್ಷದ ಮೇಲೆ ಅದ್ಯಾಕೋ ಪ್ರೀತಿ ತೋರಿಸುತ್ತಿಲ್ಲ. ಈ ಬಗ್ಗೆ ನನಗೆ ನೋವಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದರು.

ಇಲ್ಲಿ ನಡೆದ ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ‘ಉತ್ತರದಲ್ಲಿ ಪಕ್ಷಕ್ಕೆ ನೆಲೆ ಇಲ್ಲ. ಆದರೆ ನಾನು ಸುಮ್ಮನೆ ಕೂರುವುದಿಲ್ಲ. ಅಲ್ಲಿನ ಜನರನ್ನು ನಾನು ಯಾವತ್ತೂ ದೂಷಿಸುವುದಿಲ್ಲ’ ಎಂದರು.

‘ನೆರೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಇದೆಲ್ಲವೂ ಸರಿ ಹೋದ ಮೇಲೆ ಉತ್ತರ ಕರ್ನಾಟಕದಲ್ಲಿ 2-3 ಸಮಾವೇಶ ಮಾಡಲಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)