ಗುರುವಾರ ಬೆಳಿಗ್ಗೆ ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಗೆದ್ದ ನಾಲ್ಕೂವರೆ ತಾಸುಗಳ ನಂತರ ನಡೆದ ಮಹಿಳೆಯರ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸಾಯಿಕೋಮ್ ಮೀರಾಬಾಯಿ ಭಾರತ ಕೀರ್ತಿ ಪತಾಕೆ ಹಾರಿಸಿದರು. ಈ ಮೂಲಕ ನೂತನ ಕೂಟ ದಾಖಲೆ ತಮ್ಮದಾಗಿಸಿಕೊಂಡರು. 2010ರ ಕೂಟದಲ್ಲಿ ನೈಜೀರಿಯಾದ ಆಗಸ್ಟಿನಾ ನವೊಕೊಲೊ 175 ಕೆ.ಜಿ ಭಾರ ಎತ್ತಿ ದಾಖಲೆ ಬರೆದಿದ್ದರು.