‘ತೇಜಸ್‌’ಗೆ ಆಗಸದಲ್ಲೇ ಇಂಧನ ಮರು ಭರ್ತಿ

7

‘ತೇಜಸ್‌’ಗೆ ಆಗಸದಲ್ಲೇ ಇಂಧನ ಮರು ಭರ್ತಿ

Published:
Updated:
Deccan Herald

ಬೆಂಗಳೂರು: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‌’ಗೆ ಹಾರಾಟ ನಡೆಸುತ್ತಿರುವಾಗಲೇ ಇಂಧನ ಮರು ಭರ್ತಿ ಮಾಡುವ ಪರೀಕ್ಷೆಯನ್ನು ಯಶ್ವಸಿಯಾಗಿ ಪೂರ್ಣಗೊಳಿಸಲಾಗಿದೆ.

ಈ ಪರೀಕ್ಷೆ ಸೋಮವಾರ ಬೆಳಿಗ್ಗೆ 9.30 ಕ್ಕೆ ನಡೆಯಿತು. ಇದರಿಂದಾಗಿ ‘ತೇಜಸ್‌’ನ ಅಂತಿಮ ಹಾರಾಟಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಭಾರತೀಯ ವಾಯುಪಡೆಯ ಐಎಲ್‌78ನಿಂದ(ಆಯಿಲ್‌ ಟ್ಯಾಂಕರ್‌) ತೇಜಸ್‌ಗೆ 1,900 ಕೆ.ಜಿ ಇಂಧನವನ್ನು ಭರ್ತಿ ಮಾಡಲಾಯಿತು. 20,000 ಅಡಿ ಎತ್ತರದಲ್ಲಿ 270 ನಾಟ್‌ ವೇಗದಲ್ಲಿ ಸಾಗುತ್ತಿರುವಾಗಲೇ ಈ ಪ್ರಕ್ರಿಯೆ ನಡೆಯಿತು.

ಈ ಮೂಲಕ ವಾಯು ಮಾರ್ಗದಲ್ಲಿ ಸಂಚರಿಸುವಾಗಲೇ ಇಂಧನ ಮರುಭರ್ತಿ ಮಾಡುವ ಯುದ್ಧ ವಿಮಾನಗಳ ತಯಾರಿಸುವ ದೇಶಗಳ ಸಾಲಿಗೆ ಭಾರತವೂ ಸೇರಿದೆ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ತಿಳಿಸಿದ್ದಾರೆ.

ವಿಂಗ್‌ ಕಮಾಂಡರ್‌ ಸಿದ್ಧಾರ್ಥ ಸಿಂಗ್‌ ‘ತೇಜಸ್‌’ನ ಪೈಲಟ್‌ ಆಗಿ ಇಂಧನ ಮರು ಭರ್ತಿ ಕಾರ್ಯವನ್ನು ಸುಸೂತ್ರವಾಗಿ ನಡೆಸಿದರು. ಗ್ವಾಲಿಯರ್‌ನ ಭೂನಿಲ್ದಾಣದಿಂದ ಪೈಲಟ್‌ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !