ನಿಯಮಗಳ ಪ್ರಕಾರವೇ ಟೆಂಡರ್‌: ಸಚಿವರ ಸೂಚನೆ

ಬುಧವಾರ, ಮಾರ್ಚ್ 20, 2019
23 °C
‘ಪ್ರಜಾವಾಣಿ’ ಫಲಶ್ರುತಿ

ನಿಯಮಗಳ ಪ್ರಕಾರವೇ ಟೆಂಡರ್‌: ಸಚಿವರ ಸೂಚನೆ

Published:
Updated:

ಬೆಂಗಳೂರು: ‘ರಾಯಚೂರು ಜಿಲ್ಲೆಯ ‘ನಂದವಾಡಗಿ ಏತ ನೀರಾವರಿ ಯೋಜನೆ’ಯ ₹1,856 ಕೋಟಿ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ ಪ್ರಕಾರವೇ ಟೆಂಡರ್‌ ಅಧಿಸೂಚನೆಗೆ 60 ದಿನಗಳ ಕಾಲಾವಧಿ ನೀಡಬೇಕು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನಿರ್ದೇಶನ ನೀಡಿದ್ದಾರೆ. 

ನಿಯಮಗಳನ್ನು ಉಲ್ಲಂಘಿಸಿ ಅಲ್ಪಾವಧಿ ಟೆಂಡರ್‌ ಕರೆದಿರುವ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ನೀರಾವರಿ ಗುತ್ತಿಗೆ ತರಾತುರಿ’ ವರದಿ ಪ್ರಕಟವಾಗಿತ್ತು.

ಕೃಷ್ಣ ಭಾಗ್ಯ ಜಲ ನಿಗಮದ ನಾರಾಯಣಪುರ ವಲಯದ ಮುಖ್ಯ ಎಂಜಿನಿಯರ್‌ ಸಿ.ಕೃಷ್ಣೇಗೌಡ ಅವರಿಗೆ ನಿರ್ದೇಶನ ನೀಡಿರುವ ಸಚಿವರು, ‘ಟೆಂಡರ್‌ ಪ್ರಕ್ರಿಯೆಯ ಕಡತಗಳನ್ನು ನಿಗಮದ ಕಚೇರಿಯಲ್ಲಿ ವಿಸ್ತೃತವಾಗಿ ಪರಿಶೀಲಿಸಬೇಕು. ನ್ಯೂನತೆಗಳನ್ನು ಸರಿಪಡಿಸಿ ಟೆಂಡರ್ ಅಧಿಸೂಚನೆಗಳನ್ನು ಹೊರಡಿಸಬೇಕು. ಕೆಟಿಪಿಪಿ ಕಾಯ್ದೆ ಪ್ರಕಾರವೇ ಟೆಂಡರ್‌ ‍ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು’ ಎಂದಿದ್ದಾರೆ.

‘ಈ ಯೋಜನೆ ಅನುಷ್ಠಾನಕ್ಕೆ ಇದೇ 1ರಂದು ಟೆಂಡರ್‌ ಕರೆಯಲಾಗಿದೆ. ಏಪ್ರಿಲ್‌ 4ರಂದು ಟೆಂಡರ್ ತೆರೆಯಲಾಗುತ್ತದೆ. ಆಗ ಲೋಕಸಭಾ ಚುನಾವಣಾ ನೀತಿಸಂಹಿತೆ ಘೋಷಣೆಯಾಗಿರುತ್ತದೆ. ಹಾಗಾಗಿ, ‍ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಇದರಲ್ಲಿ ಅಕ್ರಮಕ್ಕೆ ಅವಕಾಶ ಇಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !