ಸುಜನ್‌, ರೈನಾ ಗೆಲುವು

7
ರಾಜ್ಯಮಟ್ಟದ ಸಬ್‌ ಜೂನಿಯರ್‌ ಟೇಬಲ್‌ ಟೆನಿಸ್‌

ಸುಜನ್‌, ರೈನಾ ಗೆಲುವು

Published:
Updated:
Deccan Herald

ಹೊಸಪೇಟೆ: ಎಸ್‌.ಎಲ್‌.ಆರ್. ಮೆಟಲಿಕ್ಸ್‌ ಸಂಸ್ಥೆಯ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ಬಾಲಕರ ವಿಭಾಗದಲ್ಲಿ ಬೆಂಗಳೂರಿನವರಾದ ಸುಜನ್‌ ಭಾರದ್ವಾಜ್‌ ಹಾಗೂ ಬಾಲಕಿಯರ ವಿಭಾಗದಲ್ಲಿ ರೈನಾ ನಾರಾ ಗೆಲುವು ಸಾಧಿಸಿದ್ದಾರೆ.

ಚೆಕ್‌ ಮೇಟ್‌ ಕ್ಲಬ್‌ನ ರೈನಾ ನಾರಾ ಅವರು ಬೆಂಗಳೂರಿನ ಎಸ್‌.ಬಿ.ಟಿ.ಟಿ.ಎ. ಕ್ಲಬ್‌ನ ಜಿ. ಕರುಣಾ ಅವರನ್ನು 14–12, 8–11, 13–11, 11–06 ಸೆಟ್‌ಗಳಿಂದ ಮಣಿಸಿದರು.

ಬೆಂಗಲೂರಿನ ಎಸ್‌.ಬಿ.ಟಿ.ಟಿ.ಎ ಕ್ಲಬ್‌ನ ವರುಣ್‌ ಬಿ. ಕಶ್ಯಪ್‌ ಅವರನ್ನು ಎಂ.ಎಸ್‌.ಎಸ್‌.ಟಿ.ಟಿ.ಎ. ಕ್ಲಬ್‌ನ ಸುಜನ್‌ ಭಾರದ್ವಾಜ್‌ ಅವರು 12–14, 11–09, 11–09, 11–09 ಸೆಟ್‌ಗಳಿಂದ ಸೋಲಿಸಿದರು.

ಶನಿವಾರ ನಡೆದ ಬಾಲಕರ ವಿಭಾಗದ ಕೆಡೆಟ್‌ ವಿಭಾಗದಲ್ಲಿ ಹೃಷಿಕೇಶ್‌ ಅವರು 13–11, 11–8, 4–11, 13–11 ಸೆಟ್‌ಗಳಿಂದ ವರುಣ್‌ ಬಿ. ಕಶ್ಯಪ್‌ ಎದುರು ಗೆಲುವು ದಾಖಲಿಸಿದರು.

ಬಾಲಕಿಯರ ವಿಭಾಗದಲ್ಲಿ ಎಂ.ಎಸ್‌.ಎಸ್‌. ಅಕಾಡೆಮಿಯ ಎ. ನಿಹಾರಿಕಾ ಅವರು 11–6, 13–11, 11–8ರಲ್ಲಿ ಟಿ. ಫರ್ಹಾ ಎದುರು ಜಯ ಸಾಧಿಸಿದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !