ಟೆಸ್ಟ್– ಶ್ರೀಹರಿಕೋಟಾದಿಂದ ಹೊರಟಿತು ಉಪಗ್ರಹ

ಶುಕ್ರವಾರ, ಏಪ್ರಿಲ್ 19, 2019
27 °C
ಟೆಸ್ಟ್– ಉಪಗ್ರಹ ಯಶಸ್ವಿ ಉಡಾವಣೆ

ಟೆಸ್ಟ್– ಶ್ರೀಹರಿಕೋಟಾದಿಂದ ಹೊರಟಿತು ಉಪಗ್ರಹ

Published:
Updated:
Prajavani

ಬೆಂಗಳೂರು: ಪ್ರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಏಕೆ?

ಉ: ದೇಶದ ಸುಮಾರು 70 ವರ್ಷಗಳ ಇತಿಹಾಸದಲ್ಲಿ ಕೊಟ್ಟ ಭರವಸೆಯನ್ನು ನೂರಕ್ಕೆ ನೂರು ಈಡೇರಿಸಿದ್ದು ಮೋದಿ. ಇವತ್ತು ದೇಶ ಯಶಸ್ವಿ ದೇಶಗಳ ಪಟ್ಟಿಯಲ್ಲಿದೆ. ದೇಶವೇ ನನ್ನ ಮನೆ, ದೇಶದ 130 ಕೋಟಿ ಜನ ನನ್ನ ಕುಟುಂಬ, ನಾನು ಈ ದೇಶದ ಪ್ರಧಾನಿ ಅಲ್ಲ, ಪ್ರಧಾನ ಸೇವಕ ಎನ್ನುವುದು ದೇಶಕ್ಕೆ ಹೊಸ ದಿಕ್ಕು ಕೊಟ್ಟಿದೆ. ಗಡಿ ರಕ್ಷಣೆ ವಿಚಾರದಲ್ಲಿ ಅವರು ತೆಗೆದುಕೊಂಡ ಸ್ಪಷ್ಟ ನಿಲುವು, ವಿದೇಶಾಂಗ ನೀತಿಗಳು ಅದ್ಭುತ ಗಮನಾರ್ಹ ಹೆಜ್ಜೆಗಳನ್ನು ದಾಖಲಿಸಿದೆ. ಅಭಿವೃದ್ಧಿಗೆ ಇನ್ನೊಂದು ಬಾಗ ಇದೆ ಅಂತ ತೋರಿಸಿಕೊಟ್ಟರು. ಹೆದ್ದಾರಿ, ಬಂದರು ಅಭಿವೃದ್ಧಿ ಮಾತ್ರವೇ ಅಲ್ಲ. ವ್ಯಕ್ತಿಯೊಬ್ಬ ಸ್ವಾಭಿಮಾನದಿಂದ ಬದುಕುವ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ತೋರಿಸಿಕೊಟ್ಟರು. ದೇಶದಲ್ಲಿ ಇಂದು ಆರ್ಥಿಕ ಸ್ಥಿರತೆ ಇದೆ. ಅವರು ತೆಗೆದುಕೊಂಡ ಹತ್ತುಹಲವು ನಿರ್ಧಾರಗಳು, ವಿಶ್ವಬ್ಯಾಂಕ್ ನಮ್ಮ ದೇಶವನ್ನು ಶ್ಲಾಘಿಸಿದೆ, ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ತಾಣವಾಗಿದೆ. ಕೊಟ್ಟ ಭರವಸೆ ಈಡೇರಿಸುವುದು ಮಾತ್ರವಲ್ಲ. ದೇಶವನ್ನು ಹೊಸ ದಿಕ್ಕಿಗೆ ಕೊಂಡೊಯ್ದಿದ್ದಾರೆ. ಶೇ 83 ಜನ ದೇಶಬಾಂಧವರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂದಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಮೋದಿ ಬರಬೇಕು.

ಇದನ್ನೂ ಓದಿ: ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯ: ಮೋದಿ

ಪುಲ್ವಾಮಾದಿಂದ ಬಿಜೆಪಿಗೆ ಲಾಭ ಆಗಿದೆ ಆಂತ ನನಗೆ ಅನ್ನಿಸಲ್ಲ. ಆದರೆ ಮೋದಿ ನಿರ್ಧಾರಕ್ಕೆ ದೇಶದಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ದೇಶ ಸ್ವಾತಂತ್ರ್ಯವಾದ ನಂತರ ಸಶಸ್ತ್ರಪಡೆಗಳಿಗೆ ಇಷ್ಟೊಂದು ಸ್ವಾತಂತ್ರ್ಯ ಎಂದಿಗೂ ಸಿಕ್ಕಿರಲಿಲ್ಲ. ಮೊದಲ ಬಾರಿಗೆ ಮಿಲಿಟರಿಗೆ ಸ್ವಾತಂತ್ರ್ಯ ಕೊಡಲಾಯಿತು. ಮೋದಿ ನಿರ್ಧಾರವನ್ನು ಅಮೆರಿಕ, ಚೀನಾ ಸಹ ಶ್ಲಾಘಿಸಿವೆ.

ಉದ್ಯೋಗ ಖಂಡಿತ ಸೃಷ್ಟಿಯಾಗಿದೆ. ಉದ್ಯೋಗ ಸಮೀಕ್ಷೆಗಳು ಇದನ್ನೇ ಹೇಳಿವೆ. ಕೆಲ ಗೊಂದಲಗಳು ಇರಬಹುದು. ಉದ್ಯೋಗ ಅಂದ್ರೆ ಕೇವಲ ಸರ್ಕಾರಿ ಕೆಲಸವೇ ಅಲ್ಲ. ಸ್ವಉದ್ಯೋಗವೂ ಉದ್ಯೋಗ ತಾನೆ? ಕೌಶಲ ಅಭಿವೃದ್ಧಿ ನಮ್ಮ ಸರ್ಕಾರ ತೆಗೆದುಕೊಂಡ ದೊಡ್ಡ ನಿರ್ಧಾರ. ಮುದ್ರಾ ಯೋಜನೆಯಿಂದ ಯುವಜನರಿಗೆ ಅನುಕೂಲವಾಗಿದೆ.

ಪ್ರ: ನೋಟು ರದ್ದತಿಯಿಂದ ಭಯೋತ್ಪಾದನೆ ತಡೆಯಲು ಸಾಧ್ಯ ಅಂದಿದ್ರು....

ಉ: ನೋಟು ರದ್ದತಿಯ ನಂತರ ಜಾರ್ಖಂಡ್ ಹೊರತುಪಡಿಸಿ ಬೇರೆಲ್ಲಿಯೂ ನಕ್ಸಲ್ ಚಳವಳಿ ಇಲ್ಲ. ನೋಟು ರದ್ದತಿಯ ನಂತರ ನಕ್ಸಲ್ ಜಾಗದಲ್ಲಿ 3 ಸಾವಿರ ಕೋಟಿ ವಶಪಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ದುಡ್ಡುಕೊಟ್ಟು ಕಲ್ಲುತೂರಾಟ ಮಾಡಿಸುವ ಕೆಲಸ ಆಗ್ತಿತ್ತು. ಅದೂ ನಿಂತು ಹೋಯಿತು. ನೋಟು ರದ್ದತಿಯ ಒಂದು ವಾರದಲ್ಲಿ ಕಲ್ಲುತೂರಾಟ ನಿಂತು ಹೋಯಿತು. 15 ದಿನಗಳಲ್ಲಿ ಶಾಲೆ–ಕಾಲೇಜು ಶುರುವಾಯಿತು. ನೋಟು ರದ್ದತಿಯ ನಂತರ ನಕ್ಸಲ್, ಭಯೋತ್ಪಾದನೆ ಕಡಿಮೆಯಾಯ್ತು.

ಕಾಶ್ಮೀರದಲ್ಲಿ ಉಗ್ರರ ದಾಳಿ ಆಗಿದೆ. ಅದರೆ ಕಾಶ್ಮೀರದಿಂದ ಹೊರಗೆ ಭಯೋತ್ಪಾದಕರ ಕೃತ್ಯಗಳು ನಡೆಯಲಿಲ್ಲ. ಕಾಶ್ಮೀರ ಭಯೋತ್ಪಾದನೆಯ ಕೇಂದ್ರವಾಗಿದೆ. ಅದನ್ನು ನಿಲ್ಲಿಸಲೆಂದೇ ಸರ್ಜಿಕಲ್ ಸ್ಟ್ರೈಕ್ ನಡೆದದ್ದು. ಅದನ್ನು ನಿಲ್ಲಿಸಲು ಹೊಸ ರೀತಿಯ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕಪ್ಪುಹಣವನ್ನು ತಡೆಯಲು ನೋಟು ರದ್ದತಿ ಒಂದು ಹೆಜ್ಜೆಯಾಗಿದೆ.

ಪ್ರ: ಪ್ರಧಾನಿ ವಿದೇಶ ಪ್ರವಾಸವೇ ವಿದೇಶಾಂಗ ನೀತಿಯೇ?

ಉ: ಬಾಲಾಕೋಟ್ ದಾಳಿಯ ನಂತರ ವಿಶ್ವದ ಯಾವುದೇ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡಲಿಲ್ಲ. ಎಲ್ಲರೂ ಪ್ರಧಾನಿ ತೆಗೆದುಕೊಂಡ ಕ್ರಮ ಸರಿ ಅಂತ್ಲೇ ಹೇಳಿದರು. ಇದಕ್ಕೆ ಕಾರಣ ವಿವಿಧ ದೇಶಗಳನ್ನು ಸಂಚರಿಸಿ, ಅಲ್ಲಿನ ನಾಯಕರನ್ನು ಮಾತನಾಡಿಸಿದ್ದ ಪ್ರಧಾನಿಯ ಕ್ರಮ. ಬಾಲಾಕೋಟ್ ನಂತರ ಪಾಕಿಸ್ತಾನ ಏಕಾಂಗಿಯಾಯಿತು.

ಪ್ರ: ಅವರೊಬ್ಬರೇ ಹೋಗ್ತಾರೆ ಏಕೆ?

ಅದು ಅವರ ವಿವೇಚನೆ. ಬೇಕು ಎನ್ನಿಸಿದರೆ ಜೊತೆಗೆ ಸಚಿವರನನ್ಉ ಕರೆದೊಯ್ತಾರೆ.

ಪ್ರ: ನೋಟು ರದ್ದತಿ ಹಠಾತ್ ಮಾಡಿದ್ದು ಏಕೆ?

ಉ: ಎಲ್ಲವನ್ನೂ ಕೇಳಿ ಮಾಡಲು ಆಗಲ್ಲ. ಅವರು ಸಂಪುಟ ಸಭೆ ಕರೆದು, ನಮ್ಮನ್ನು ಅರ್ಧಗಂಟೆ ಕೂತಿರಿ ಅಂತ ಹೇಳಿ ನಂತರ ಹೊರಗೆ ಹೋಗಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿ ಬಂದರು. ಅವರು ದೇಶದ ಹಿತಾಸಕ್ತಿಯಿಂದ ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳ ಕಾರಣದಿಂದಲೇ ಅವರು ವಿಶ್ವನಾಯಕರಾದರು.

ಪ್ರಧಾನಿ ಕಚೇರಿಯಲ್ಲಿ ಪ್ರತಿ ಸಚಿವಾಲಯಕ್ಕೆ ಸಂಬಂಧಿಸಿದ ವಿವಿಧ ಹಂತದ ಅಧಿಕಾರಿಗಳಿರುತ್ತಾರೆ. ಪಾಲಿಸಿ ವಿಷಯಗಳು ಬಂದಾಗ ಪ್ರಧಾನಿ ನಮ್ಮನ್ನು ಕರೆಸಿ ಮಾತನಾಡ್ತಾರೆ. ಕೊನೆಯ ಹಂತದಲ್ಲಿ ಮಾತನಾಡ್ತಾರೆ ಬಿಟ್ಟರೆ ನಮ್ಮ ಕೆಲಸಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ. ನನಗೆ ಅನುಮಾನಗಳಿದ್ದರೆ ನಾನು ನೇರವಾಗಿ ಪ್ರಧಾನಿ ಜೊತೆಗೆ ಮಾತನಾಡ್ತೀವಿ. ಎಲ್ಲವನ್ನೂ ಮೋದಿಯೇ ಮಾಡ್ತಾರೆ, ನಮಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಅನ್ನೋದು ಸುಳ್ಳು. ಮೋದಿ ದಿನದ 24 ಗಂಟೆಯೂ ದೇಶದ ಬಗ್ಗೆ ಯೋಚನೆ ಮಾಡ್ತಾರೆ. ವಿರೋಧ ಪಕ್ಷದ ಸ್ಥಾನಮಾನ ಗಳಿಸಲು ಸಾಧ್ಯವಾಗದ ನಾಯಕರು ಹೀಗೆ ಮಾತನಾಡೋದು ಎಷ್ಟು ಸೂಕ್ತ ಅಂತ ಜನ ತೀರ್ಮಾನ ಮಾಡ್ತಾರೆ.

ಸಿಬಿಐನಲ್ಲಿ ಅಧಿಕಾರಿಗಳ ಒಳಜಗಳದಿಂದ ಸ್ವಾಯತ್ತಸಂಸ್ಥೆ ಕೆಡುತ್ತೆ ಅಂದಾಗ ಪ್ರಧಾನಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಯಿತು. ಸಿವಿಸಿ ಜೊತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಕಳ್ಳರನ್ನು ಹಿಡಿದಾಗ ಆಡಳಿತ ಪಕ್ಷದ ಮೇಲೆ ಗೂಬೆ ಕೂಡಿಸುವುದು ಸ್ವಾಭಾವಿಕ. ಕಳೆದ ಐದು ವರ್ಷಗಳಲ್ಲಿ ಯಾವುದಾದರೂ ಮಂತ್ರಿ ಹಣ ದುರುಪಯೋಗ ಮಾಡಿದ ಆರೋಪ ಇದೆಯಾ? ಕಾಂಗ್ರೆಸ್ ಕಾಲದಲ್ಲಿ ಹೇಗಿತ್ತು? ಮೊಬೈಲ್ ತರಂಗ ಕದಿಯುವ ಕೆಲಸ ಮಾಡಿದವರು ಹೀಗೆ ಹೇಳ್ತಾರೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಬಾಗಿಲು ಹಾಕಿದೆ.

ಯಾವಾಗ ಸಚಿವ ತನ್ನ ಸ್ವಂತ ಅಜೆಂಡಾ, ಪ್ರಶ್ನೆ, ಉತ್ತರ ಇದ್ದಾಗ ಪ್ರಧಾನಿಯೇ ಏಕೆ ಉತ್ತರ ಕೊಡಬೇಕು. ಕಾಂಗ್ರೆಸ್ ಹೇಳುವಂತೆ ಎಲ್ಲಕ್ಕೂ ಪ್ರಧಾನಿಯೇ ಉತ್ತರ ಹೇಳಬೇಕು ಅಂದ್ರೆ ಸಚಿವರು ಏಕೆ ಇರಬೇಕು. ವಿರೋಧ ಪಕ್ಷಗಳ ಪ್ರಕಾರ ಪ್ರಧಾನಿ ಬೇರೆ ಯಾವುದೇ ಕೆಲಸ ಮಾಡದೆ ಸಂಸತ್ತಿನಲ್ಲಿ ಕೂತಿರಬೇಕು ಅಂತಾರೆ. ಅವರೇನು ಮನಮೋಹನ್ ಸಿಂಗ್ ಕೆಟ್ಟು ಹೋದ್ರಾ?

ನಾನು ಪ್ರಧಾನಿಯ ಬಗ್ಗೆ ಮಾತನಾಡಲ್ಲ, ನರೇಂದ್ರ ಮೋದಿಯ ದೌರ್ಬಲ್ಯ ಕಂಡುಹಿಡಿಯುವಷ್ಟು ದೊಡ್ಡವನಲ್ಲ. ಅವರು ಐದು ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಳ್ಳಲಿಲ್ಲ, ಹಣ ಲೂಟಿ ಮಾಡಲಿಲ್ಲ. ವಿರೋಧ ಪಕ್ಷದವರು ದೇಶದ ಹಿತಾಸಕ್ತಿ ಬಗ್ಗೆ ಮಾತನಾಡ್ತಿಲ್ಲ. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡ್ತಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಬಜೆಟ್ ಬಗ್ಗೆ ಮಾತನಾಡುವಾದ ಸಿದ್ದರಾಮಯ್ಯನ ಬಗ್ಗೆ ವೈಯಕ್ತಿಕವಾಗಿ ಮಾತನಾಡಲಿಲ್ಲ. ಆದರೆ ಬಜೆಟ್‌ನ ಲೋಪದೋಷಗಳನ್ನು ಹೇಳಿದ್ದೆ.

ಸಿದ್ದರಾಮಯ್ಯ ನಾನು ಕೊಟ್ಟ ಅಂಕಿಅಂಶ ಒಪ್ಪಿಕೊಂಡಿದ್ರು. ನನಗೂ ಖುಷಿಯಾಯ್ತು. ಅದು ಬಿಟ್ಟು ವಿರೋಧಪಕ್ಷಗಳು ನನ್ನ ಬಟ್ಟೆ ಬಗ್ಗೆ, ನಗುವಿನ ಬಗ್ಗೆ ಮಾತನಾಡಿದ್ರೆ ಏನು ಪ್ರಯೋಜನ?

ಹಿಂದೆ ಪ್ರತಿಪಕ್ಷ ಅಂತ ಕರೀತಿದ್ರು. ಈಗ ಕೇವಲ ವಿರೋಧ ಪಕ್ಷ ಮಾತ್ರ ಇದೆ. ಎಲ್ಲವನ್ನೂ ವಿರೋಧಿಸುವ ಪಕ್ಷ ಇದಾಗ್ತಿದೆ. ಇಂದಿರಾಗಾಂಧಿಯನ್ನು ಅಟಲ್‌ಜಿ ದುರ್ಗಾದೇವಿಗೆ ಹೋಲಿಸಿದ್ದರು. ಅವರೂ ಆಗ ಪ್ರತಿಪಕ್ಷದಲ್ಲಿಯೇ ಇದ್ದರು. ಆದರೆ ಇಂದು ಇವರ ಕಥೆ ಏನಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗ್ತಿದೆ.

ಉದ್ಯೋಗವನ್ನು ಎರಡು ರೀತಿ ಅಂದಾಜು ಮಾಡ್ತೀವಿ. ಒಂದು ಪಿಎಫ್ ಮತ್ತೊಂದು ಅಸಂಘಟಿತ ಕಾರ್ಮಿಕರು. ಬ್ಯಾಂಕ್ ಲೋನ್ ಆಧರಿಸಿಯೂ ಉದ್ಯೋಗ ಅಂದಾಜು ಮಾಡ್ತೀವಿ. ನನ್ನ ಜೊತೆ 6500 ಉದ್ಯೋಗಿಗಳಿದ್ದಾರೆ. ಚುನಾವಣೆ ಘೋಷಣೆಯಾದ ಕಾರಣ ಅಧಿಕೃತ ಅಂಕಿಅಂಶ ಹೊರಗೆ ಬರಲಿಲ್ಲ. ಅಂಕಿಅಂಶಗಳ ಆಯೋಗದ ಮುಖ್ಯಸ್ಥರು ರಾಜೀನಾಮೆಯಿಂದ ಪ್ರಕಟಿಸಲು ಆಗಲಿಲ್ಲ. ಮುದ್ರಾ ಯೋಜನೆಯಿಂದ 14 ಕೋಟಿ ಜನರಿಗೆ ಉದ್ಯೋಗ ಸಿಕ್ಕಿದೆ. ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ 6000 ಜನರಿಗೆ ಉದ್ಯೋಗ ಸಿಕ್ಕಿದೆ.

ಪಕೋಡ ಮಾಡುವುದು ಒಂದು ಸ್ವ ಉದ್ಯೋಗ ಅಂತ ನನಗೆ ಅನ್ನಿಸುತ್ತೆ. ಯಾವುದರಿಂದ ಜೀವನ ಮಾಡಲು ಕೆಲಸ ಮಾಡ್ತೀನೋ ಅದೆಲ್ಲವೂ ಸ್ವ ಉದ್ಯೋಗ.

2020ಕ್ಕೆ ನಿರುದ್ಯೋಗ ಮಟ್ಟ ಹೆಚ್ಚಾಗುತ್ತೆ ಅಂತ ಇದೆ ಒಪ್ತೀರಾ?

– ನಾನು ಅದನ್ನು ನಿರಾಕರಿಸುವುದಿಲ್ಲ. ಸಾಂಖ್ಯಿಕ ಇಲಾಖೆ ವರದಿ ಪ್ರಕಟವಾಗುವವರೆಗೆ ಅಧಿಕೃತವಾಗಿ ಏನೂ ಹೇಳಲು ಆಗುವುದಿಲ್ಲ. ಹೊಸ ಸರ್ಕಾರ ಅದನ್ನು ಜನರ ಮುಂದೆ ಇಡುತ್ತೆ.

ಈಗ ಸೋಷಿಯಲ್ ಮೀಡಿಯಾ ಬಹಳ ಮುಖ್ಯ. ಒಂದು ಕಾಲದಲ್ಲಿ ರೇಡಿಯೋ, ನಂತರ ಪ್ರಿಂಟ್, ಎಲೆಕ್ಟ್ರಾನಿಕ್ ಮೀಡಿಯಾ ಬಂತು. ಹಲವಾರು ಜನರು ಕೆಲಸ ಮಾಡುವವರು ಟೀವಿ ಮುಂದೆ ಕೂರಲು ಆಗದು. ಸೋಷಿಯಲ್ ಮೀಡಿಯಾದಲ್ಲಿ ಆಗಿನದ್ದು ಆಗ ಬರುತ್ತೆ. ಸುಧಾರಣೆಗೆ ತಕ್ಕಂತೆ ಅಪ್‌ಡೇಟ್ ಆಗ್ತಿದ್ದಾರೆ ಪ್ರಧಾನಿ. ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಿಂಬಾಲಕರಿದ್ದಾರೆ. ಮೀಡಿಯಾಕ್ಕೆ ಹೋಗಿ ಮಾತನಾಡಿದರೆ ಮಾತ್ರ ಯಾವುದೋ ಕೆಲಸ ಯಶಸ್ವಿ ಅಂತ ಹೇಳಲು ಆಗದು. ಪ್ರಧಾನಿ ಅನುಸರಿಸುವ ಕ್ರಮವೇ ಸರಿ.

ಪ್ರಧಾನಿಗೆ ನೇರವಾಗಿ ಪ್ರಶ್ನೆಗಳನ್ನು ಎದುರಿಸಲು ಅವಶ್ಯಕತೆಯೇ ಬಂದಿಲ್ಲ. ಮೀಡಿಯಾದವರು ಪ್ರಶ್ನೆ ಕೇಳೋದು, ಅದಕ್ಕೆ ಉತ್ತರ ಕೇಳಲು ಆಗದೆ ತಡಕಾಡುವುದು ಜನರಿಗೆ ಇಷ್ಟವಾಗಬಹುದು. ಆದರೆ ಅದೇ ಸರ್ವಸ್ವ ಅಲ್ಲ. ತಂತ್ರಜ್ಞಾನ ಸುಧಾರಣೆಯಾದ ಹಾಗೆ ನಾವೂ ಬದಲಾಗ್ತೀವಿ.

ಮೋದಿ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ₹15 ಲಕ್ಷ ನೇರವಾಗಿ ನಿಮ್ಮ ಖಾತೆಗೆ ಬರುತ್ತೆ ಅಂತ ಅವರ ಮಾತಿನ ಅರ್ಥವಲ್ಲ. ತೆರಿಗೆ ಸಂಗ್ರಹ ಸರಿಯಾಗಿ ಆಗ್ತಿದೆ, ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಕಪ್ಪುಹಣ ವಿದೇಶದಿಂದ ದೇಶಕ್ಕೆ ಬಂದರೆ ಆರ್ಥಿಕ ಸ್ಥಿತಿ ಸುದಾರಿಸುತ್ತೆ ಎಂದು ಅದರ ಅರ್ಥ.

ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಎಸ್‌ಐಟಿ ಆರಂಭಿಸಿದರು. ನಾವು ಜವಾಬ್ದಾರಿ ನಿರ್ವಹಿಸಿದ್ದೇವೆ.

ನನ್ನ ಪರೀಕ್ಷೆಯ ರಿಪೋರ್ಟ್‌ ಕಾರ್ಡ್‌ ಜನರ ಮುಂದೆ ಇಟ್ಟಿದ್ದೇನೆ. ನಾನು ವಾರದಲ್ಲಿ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಇರಲು ಸಾಧ್ಯ. ನನ್ನ 8 ವಿಧಾನಸಭಾ ಕ್ಷೇತ್ರಗಳಲ್ಲಿ 180 ಬಾರಿ ಪ್ರವಾಸ ಮಾಡಿದ್ದೇನೆ. ನಾನು 6.15ಕ್ಕೆ ನನ್ನ ಕಚೇರಿಯಲ್ಲಿ ಇರ್ತಿದ್ದೆ ಸಿಎಂ ಆಗಿದ್ದಾಗ. 8.15ಕ್ಕೆ ಸ್ನಾನಕ್ಕೆ ಹೋಗಿ, 9ಕ್ಕೆ ತಯಾರಿ ಆಗ್ತೀನಿ. ಯಾರು ಬಂದ್ರೂ ನಾಳೆ ಬಾ ಅಂತ ಹೇಳಲ್ಲ. ನನ್ನ ಮಾದರಿ ಗ್ರಾಮ ದೇಶಕ್ಕೇ ಅತ್ಯುತ್ತಮ ಅಂತ ನೀವೇ ಬರೆದಿದ್ದೀರಿ. ಇನ್‌ಫೋಸಿಸ್ ಸೇರಿದಂತೆ ಹಲವು ದಾನಿಗಳ ನೆರವಿನಿಂದ ಶಾಲೆಗಳನ್ನು ಸುದಾರಿಸಿದ್ದೇನೆ.

ನಾನು ಈವರೆಗೆ ಯಾರಲ್ಲಿಯೂ ಕೋಪ ಮಾಡಿಕೊಳ್ಳಲಿಲ್ಲ. ನನ್ನ ಕ್ಷೇತ್ರದಲ್ಲಿ ಎರಡನೇ ಹೆಸರು ಬರಲೇ ಇಲ್ಲ. ನಾನು ರಾಜಕಾರಣಕ್ಕೆ ಬಂದು 25 ವರ್ಷವಾಯಿತು. ಹಲವು ಅಧಿಕಾರಿಗಳನ್ನು ನಿರ್ವಹಿಸಿದ್ದೇನೆ. ಈ ಸಲ ಬಿಟ್ಟುಬಿಡೋಣ ಅಂದುಕೊಂಡಿದ್ದೆ. ಆದರೆ ಪಕ್ಷದ ಹಿರಿಯರು ಹೆಳಿದ ಕಾರಣ ಈ ಬಾರಿ ಸ್ಪರ್ಧೆ ಮಾಡ್ತಿದ್ದೇನೆ. ನಾನು ನಡೆದ ರೀತಿ ಸರಿಯಿದೆ. ಹಾಗಿದ್ರೆ ಮಾತ್ರ ನನಗೆ ರಾತ್ರಿ ನಿದ್ದೆ ಬರುತ್ತೆ. ಇವತ್ತು ನಾಮಪತ್ರ ಹಾಕೋದು ಸುಮಾರು 8 ಸಾವಿರ ಜನ ಬಂದಿದ್ರು. ನನಗೆ ಪರವಾಗಿಲ್ಲ ಅಂತ 35 ಮಾರ್ಕು ಕೊಡ್ತಾರೆ ಅಂತ ಭರವಸೆ ಇದೆ.

ರಾಹುಲ್ ಗಾಂಧಿ ಏನು ಘೋಷಣೆ ಮಾಡಿದ್ರೂ ಅದು ಅನುಷ್ಠಾನ ಸಾಧ್ಯವಿಲ್ಲ ಅಂತ ದೇಶಕ್ಕೇ ಗೊತ್ತಿದೆ. ಅವರ ಅಜ್ಜಿ ಗರೀಬಿ ಹಠಾವೋ ಅಂತ ಘೋಷಿಸಿ ಮೂರು ಸಲ ಕಾಂಗ್ರೆಸ್ ಗೆಲ್ತು. ಗರೀಬಿ ಯಾರದು ಹೋಯಿತು ಅಂತ ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರದ್ದು ಹೋಯಿತು. ಸದಾನಂದಗೌಡ ಸುಳ್ಳು ಹೇಳಿದ್ರೂ ಜನರಿಗೆ ಗೊತ್ತಾಗುತ್ತೆ. ಜನ ಬುದ್ಧಿವಂತರಾಗಿದ್ದಾರೆ.

ರಾಜಕಾರಣದಲ್ಲಿ ಪೊಲಿಟಿಕಲ್ ಸ್ಟ್ರಾಟಜಿ ಇರುತ್ತೆ. ಒಂದು ಹಂತದಲ್ಲಿ ’ಕಾಂಗ್ರೆಸ್ ಹಠಾವೋ‘ ಜನರ ಅಪೇಕ್ಷೆ ಆಗಿತ್ತು. ನಾವು ಗಾಂಧಿ ಹೇಳಿದ ಹಲವು ಆಶಯಗಳನ್ನು ಅನುಷ್ಠಾನಕ್ಕೆ ತಂದ್ವಿ. ಅದೇ ಥರ ಕಾಂಗ್ರೆಸ್ ಮುಕ್ತ ಭಾರತವೂ ಗಾಂಧಿ ಅವರ ಅಪೇಕ್ಷೆ ಆಗಿತ್ತು. ಪ್ರಯತ್ನ ಪಟ್ವಿ.

ಹಿಂದೆ ಇಂಡಿಯಾ ಶೈನಿಂಗ್ ಅಂತ ನಾವು ಹೇಳಿದ್ವಿ. ಆದರೆ ಜನರನ್ನು ಮುಟ್ಟಲು ಆಗಲಿಲ್ಲ. ಈಗ ಹಾಗಲ್ಲ. ನಾವು ಹೇಳಿದ್ದೆವು, ಮಾಡಿ ತೋರಿಸಿದ್ದೇವೆ.

ಅಟಲ್‌ಜಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನ, ಕಿಸಾನ್ ಕ್ರೆಡಿಟ್ ಕಾರ್ಡ್, ಸರ್ವ ಶಿಕ್ಷಾ ಅಭಿಯಾನದ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ರು. ನಮ್ಮ ಜಾಹೀರಾತುಗಳನ್ನು ಜನರು ನೋಡಲಿಲ್ಲ. ಆದರೆ ಈಗ ಪರಿಸ್ತಿತಿ ಬದಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ನಮ್ಮ ಸಾಧನೆ ಮನವರಿಕೆ ಮಾಡಿಕೊಟ್ಟಿದ್ದೇವೆ.

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ನಾವು ಶಿಫಾರಸು ಮಾಡಿದ್ದೆವು. ಈವರೆಗೆ ಯಾಕೆ ಹೆಸರು ಘೋಷಿಸಿಲ್ಲ ಅಂತ ನಾನು ಹೇಳಲು ಸಾಧ್ಯವಿಲ್ಲ.

ಪ್ರಧಾನಿ ಬೆಂಗಳೂರಿನಿಂದ ಸ್ಪರ್ಧಿಸುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ.

ದೇವೇಗೌಡರ ಜೊತೆಗೆ ಒಳಒಪ್ಪಂದ ಅಂದ್ರೆ ಖುಷಿಯಾಗುತ್ತೆ. ನನಗೆ ಅಷ್ಟೊಂದು ಶಕ್ತಿ ಇದೆ ಅಂತ ನೀವು ನಂಬ್ತೀರಲ್ಲಾ? ನಾನು ಕರಾವಳಿ ಗೌಡ. ಈ ಕಡೆ ಹಳೇ ಮೈಸೂರು ಭಾಗದವನಲ್ಲ. ದೇವೇಗೌಡರು ಬಂದಿದ್ರು ಅವರ ಬಗ್ಗೆ ನನ್ನಲ್ಲಿ ಗೌರವ ಇದೆ. ಅದರೆ ಭಯ ಇಲ್ಲ.

ನಾನು ಸುಳ್ಯ ತಾಲ್ಲೂಕಿನವನು. ನನ್ನ ಪಕ್ಷ ಪುತ್ತೂರಿನಲ್ಲಿ ಸ್ಪರ್ಧಿಸುವಂತೆ ಹೇಳಿತು. ಸ್ಪರ್ಧಿಸಿ ಗೆದ್ದೆ. ನಂತರ ಕೊಡಗು– ಮಂಗಳೂರಿನಲ್ಲಿ ಸ್ಪರ್ಧಿಸಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ನಂತರ ಬೆಂಗಳೂರಿಗೆ ಬಂದೆ. ಬೆಂಗಳೂರು ಉತ್ತರದಲ್ಲಿ 30 ಲಕ್ಷ ಮತದಾರರು ಇದ್ದಾರೆ. ಇದು ದೇಶದ 2ನೇ ದೊಡ್ಡ ಕ್ಷೇತ್ರ. ನಾನು ವಲಸೆ ಆಗಬಾರದು. ಇಲ್ಲೇ ನಿಲ್ಲಬೇಕು ಅಂತ ಈ ಸಲ ನಿಂತೆ.

ಪಕ್ಷದ ಕೆಲ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗುವ ಸಾಧನೆ ಮಾಡಿಲ್ಲ. ಆದರೆ ಮೋದಿಯೇ ನಮ್ಮ ಶಕ್ತಿ. ಶೇ50ರಷ್ಟು ಮತಗಳು ಮೋದಿಯಿಂದಲೇ ಬರುತ್ತವೆ.

ರಾಜ್ಯದ 28ರ ಪೈಕಿ 22 ಸ್ಥಾನಗಳನ್ನು ನಾವು ಗೆಲ್ತೀವಿ.

ಈ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆಯುತ್ತವೆ. ಸ್ಥಳೀಯ ವಿಷಯಗಳ ಮೇಲೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹೇಳಿದ್ದು ಅವರ ಮೂಡ್‌ನಲ್ಲಿ ಸರಿಯಿರರಬಹುದು. ಆದರೆ ಈಗ ಕಾಲ ಬದಲಾಗಿದೆ.

ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಒಬ್ಬ ವ್ಯಕ್ತಿ ಅಂದ ಮೇಲೆ ಒಳ್ಳೇದು–ಕೆಟ್ಟದ್ದು ಅಂತ ಇರುತ್ತೆ. ನಾವು ಮನಃಪೂರ್ವಕ ಪ್ರಾರ್ಥನೆ ಮಾಡುವುದು ದೇವರನ್ನೇ. ಯಡಿಯೂರಪ್ಪ ಅವರ ಹೋರಾಟ, ನಡೆದುಬಂದ ದಾರಿ. ಅವರು ರಾಜ್ಯದ ನಂಬರ್ 1 ನಾಯಕ.

ಯಡಿಯೂರಪ್ಪ ಅ ಸ್ಥಾನದಿಂದ ಹಿಂದೆ ಬರ್ತಾರೆ ಅಂದ ಮೇಲೆ ಉತ್ತರಾಧಿಕಾರಿ ಪ್ರಶ್ನೆ ಬರೋದು. ಯಡಿಯೂರಪ್ಪ ವಿಚಾರದಲ್ಲಿ ಈ ಪ್ರಶ್ನೆ ಬೇಡ.

ಮುಗು ಹುಟ್ಟಿದಾಗಲೇ ಇದು ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಅಂತ ಘೋಷಿಸುವ ಮನಃಸ್ಥಿತಿ ಯಾರಲ್ಲೂ ಇರಬಾರದು. ವಂಶಾಡಳಿತ ಸರಿಯಲ್ಲ.

ಸ್ವಾರ್ಥ ಇಲ್ಲದ ಮನುಷ್ಯ ಇರುವುದೇ ಇಲ್ಲ. ಅದಕ್ಕೆ ಯಾರೂ ಹೊರತಲ್ಲ.

ಶೋಭಾಗೆ ಏಕೆ ಟಿಕೆಟ್ ಕೊಟ್ರೀ???

ಚರ್ಚೆಗಳು ಸಾಮಾನ್ಯ. ಆದರೆ ಚರ್ಚೆಯ ನಂತರ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡ್ತಾರೆ. ಕೋರ್ ಕಮಿಟಿಗೆ ಶೋಭಾ ಗೆಲ್ಲುವ ಅಭ್ಯರ್ಥಿ ಅನ್ನಿಸಿತು. ಹೀಗಾಗಿ ಕೊಟ್ರು. ತೇಜಸ್ವಿನಿ ವಿಚಾರದ ಬಗ್ಗೆ ಏನೂ ಹೇಳುವುದಿಲ್ಲ.

ಸಾಂಖ್ಯಿಕ ಖಾತೆ ಕಡಿಮೆ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ದೇಶದ ಎಲ್ಲ ಕುಟುಂಬಗಳೂ ತಮ್ಮ ವಾರ್ಷಿಕ ಆದಾಯದ ಶೇ 15ರಿಂದ 30ರಷ್ಟನ್ನು ಆರೋಗ್ಯಕ್ಕೆ ಖರ್ಚು ಮಾಡ್ತಿತ್ತು. ಆಯುಷ್ಮಾನ್ ಭಾರತ ಪ್ರಧಾನಿ ಘೋಷಿಸಿದ ಯೋಜನೆಯೇ ಆದರೂ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಇಲಾಖೆ.

ನಿಮ್ಮ ವಿರುದ್ಧದ ಷಡ್ಯಂತ್ರ ಮಾಡಿದವರನ್ನು ದೇಶದ್ರೋಹಿಗಳು ಅಂದಿದ್ರೀ…

ನನ್ನ ವಿರುದ್ಧದ ಸುದ್ದಿ ಹರಡುವವರು ದೇಶದ್ರೋಹಿಗಳು ಅನ್ನಲಿಲ್ಲ. ಸುಳ್ಳು ಸುದ್ದಿ ಹರಡುವವರು ದೇಶದ್ರೋಹಿ ಅಂತ ಮಹಾತಮ್ ಗಾಂಧಿ ಹೇಳಿದ್ದಾರೆ ಆಂದಿದ್ದೆ ಅಷ್ಟೇ.

ಮಂಡ್ಯದಲ್ಲಿ ನಮ್ಮ ಶಕ್ತಿ ಕಡಿಮೆ. ಅಲ್ಲಿ ಜೆಡಿಎಸ್‌ ಈ ಸಲ ಹೊರಗೆ ಹೋಗುತ್ತೆ. ನಂತರ ಬಿಜೆಪಿ ಬರುತ್ತೆ. ದೇವೇಗೌಡರು ಪ್ರಧಾಇ– ಸದಾನಂದಗೌಡ ಮುಖ್ಯಮಂತ್ರಿ ಆಗ್ತಾರೆ ಅಂತ ಯಾರೂ ಯೋಚಿಸಿರಲಿಲ್ಲ.

ಬಿಜೆಪಿ ಮೊದಲು ಅಧಿಕಾರಕ್ಕೆ ಬಂದಿದ್ದು ಸದಾನಂದಗೌಡರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದಾಗ ಅನ್ನೋದು ನನಗೆ ಹೆಮ್ಮೆ. ನಾನು ಅತ್ಯಂತ ಸಂತೃಪ್ತ ರಾಜಕಾರಿಣಿ. ಕೇಂದ್ರಕ್ಕೆ ಹೋದಮೇಲೆ ಮತ್ತೆ ರಾಜ್ಯಕ್ಕೆ ಬರುವ ಆಲೋಚನೆ ಇಲ್ಲ. ಆದರೆ ಪಕ್ಷ ಹೇಳಿದರೆ ಯಾವುದೇ ಕೆಲಸ ಮಾಡ್ತೀನಿ.

ಸುಮಲತಾ ಗೆದ್ದರೆ ಅವರು ನಂತರ ಬಿಜೆಪಿ ಸೇರುತ್ತಾರೆ. ಶೇ 99ರಷ್ಟು ಭಾಗ ನನ್ನ ಈ ಮಾತು ನಿಜ.

ಹಿಂದಿನ ಸಲ ಅದೇ ಕೊನೆಯ ಚುನಾವಣೆ ಅಂತ ಹೇಳಿದ್ದೆ. ಈ ಸಲ ಇದು ಕೊನೆಯದ್ದು ಅಂತ ಹೇಳ್ತಿದ್ದೀನಿ

ನನ್ನ ಲೋನ್ ಮತ್ತು ಆಸ್ತಿಯನ್ನು ಗಮನಿಸಿ. ನನ್ನ ನಂತರ ಮಕ್ಕಳು ಬದುಕಬೇಕು ಅಂತ ಆಸೆಪಡುವುದು ಸ್ವಾಭಾವಿಕ. ಮುಂದಿನ ಪೀಳಿಗೆ ನ್ಯಾಯಯುತವಾಗಿ ಬದುಕಬೇಕು ಅನ್ನೋ ಆಸೆಯೇ ತಪ್ಪೇ? ರಾಜಕಾರಿಣಿಗಳು ಆಸೆಯೇ ಪಡಬಾರದು, ಆಸ್ತಿ ಮಾಡಬಾರದು ಅನ್ನೋದು ತಪ್ಪು. ನಾವು ಕಷ್ಟಪಟ್ಟು ದುಡಿದಿದ್ದೀವೆ. ಬ್ಯಾಂಕ್‌ನಿಂದ ಸಾಲ ತಗೊಂಡಿದ್ದೇನಿ. ಅದನ್ನೂ ಗಮನಿಸಿ.

ಅನಂತಕುಮಾರ ಹೆಗಡೆ ಸಂಸತ್ತಿನಲ್ಲಿಯೇ ತಪ್ಪಾಗಿದೆ ಅಂತ ಒಪ್ಪಿಕೊಂಡಿದ್ದಾರೆ. ಅವರು ಜಾಸ್ತಿ ಮಾತಾಡ್ತಾರೆ. ಹಲವಾರು ಸಂದರ್ಭಗಳಲ್ಲಿ ಅವರು ಶಕ್ತಿ, ಹಲವಾರು ಬಾರಿ ಹೊಡೆತ.

ದಕ್ಷಿಣ ಕನ್ನಡದಲ್ಲಿ ಬಿಟ್ರೆ ಬೇರೆ ಕಡೆ ಗೆಲ್ಲೋದು ಕಷ್ಟ.

ವ್ಯಕ್ತಿ ಕುಳಿತ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಒಂದು ಭಾಗದಲ್ಲಿ ಜಾಸ್ತಿ ನೀರು ಸಮುದ್ರಕ್ಕೆ ಹೋಗ್ತಿದೆ. ಇನ್ನೊಂದು ಕಡೆ ನೀರು ಸಿಗ್ತಿಲ್ಲ ಅಂತ ಕಾಯಿಲೆಗಳಿಂದ ಜೀವ ಕಳೆದುಕೊಳ್ತಿದ್ದಾರೆ ಅಂದಾಗ, ನನ್ನ ಊರು ಅಂತಲ್ಲ ಯಾವುದೇ ಊರಿನಿಂದ ನೀರು ಕೊಡುವುದು ಧರ್ಮ. ಆ ಕೆಲಸ ಮಾಡಿದ್ದೇನೆ. 1318 ಅಡಿ ಎತ್ತರದಲ್ಲಿ ಬೀಳುವ ಮಳೆಯಲ್ಲಿ ವರ್ಷಕ್ಕೆ 100 ದಿನಗಳ ಕಾಲ ಕೋಲಾರದ ಕಡೆಗೆ ನೀರು ತನ್ನಿ ಅಂತ ಹೇಳಿದೆ. ಕೆರೆಗಳನ್ನು ತುಂಬಿಸಿ, ಅಂತರ್ಜಲ ಸುಧಾರಣೆ ನನ್ನ ಕರ್ತವ್ಯ. ನನ್ನ ಊರಿನಲ್ಲಿ ಕಪ್ಪು ಬಾವುಟ ಹಿಡಿದಿದ್ದಾರೆ. 1300 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತೆ. ಅದನ್ನು ಕೋಲಾರದ ಕಡೆಗೆ ಕೊಡೋದು ನನ್ನ ಇಷ್ಟವಾಗಿತ್ತು. ರಾಜ್ಯದ ಅಭಿವೃದ್ಧಿ ಅಂದರೆ ಎಲ್ಲ ಜಿಲ್ಲೆಗಳ ಅಭಿವೃದ್ಧಿ. ಅದು ನನ್ನ ಜೀವನದಲ್ಲಿ ಒಳ್ಳೆಯ ಯೋಜನೆ. ಇನ್ನೊರೆಡು ವರ್ಷಗಳಲ್ಲಿ ನೀರು ಹರಿಯಲು ಅರಂಭಿಸುತ್ತೆ.

ನಾವೆಂದೂ ಮಲತಾಯಿ ಧೋರಣೆ ಮಾಡಿಲ್ಲ.

ನನ್ನ ವಿರುದ್ಧ ಅಭ್ಯರ್ಥಿ ಹಾಕೋದಕ್ಕಿಂತ ಜಾಸ್ತಿ ರಾಜಕೀಯ ಹೊಂದಾಣಿಕೆ ಯೋಚನೆ ಮಾಡ್ತಿದ್ದಾರೆ. ಮೈತ್ರಿ ಸರ್ಕಾರದ ರಾಜಕಾರಣ ಮತದಾರರಿಗೆ ಭ್ರಮನಿರಸನ ಉಂಟು ಮಾಡಿದೆ. ಇದು ಒಳ್ಳೇದಲ್ಲ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !