ಶುಕ್ರವಾರ, ಫೆಬ್ರವರಿ 28, 2020
19 °C

55 ತಹಶೀಲ್ದಾರ್‌, 122 ಉಪ ನೋಂದಣಾಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ‘ಸಮ್ಮಿಶ್ರ ಸರ್ಕಾರ’ದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದೆ.

ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್‌ ಗ್ರೇಡ್‌–1 ಮತ್ತು ಗ್ರೇಡ್‌ –2 ಶ್ರೇಣಿಯ 55 ಅಧಿಕಾರಿಗಳನ್ನು ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 122 ಹಿರಿಯ ಉಪ ನೋಂದಣಾಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.

ಭಾನುವಾರ (ಜು. 29) 10 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರ ಆಪ್ತ ಅಧಿಕಾರಿ ಕರೀಗೌಡ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಆದರೆ, ಕರೀಗೌಡ ಅವರ ನೇಮಕಕ್ಕೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ ಜಿಲ್ಲೆಗಳಿಗೆ ವರ್ಗಾವಣೆಗೊಂಡ ತಹಶೀಲ್ದಾರ್‌ಗಳ ವಿವರ:

* ಎನ್‌. ತೇಜಸ್‌ ಕುಮಾರ್‌– ತಹಶೀಲ್ದಾರ್‌, ಬೆಂಗಳೂರು ಉತ್ತರ ತಾಲ್ಲೂಕು

* ಶಿವಪ್ಪ ಎಚ್‌. ಲಮಾಣಿ– ವಿಶೇಷ ತಹಶೀಲ್ದಾರ್‌, ಬೆಂಗಳೂರು ದಕ್ಷಿಣ ತಾಲ್ಲೂಕು

* ಎಸ್‌.ಎಂ. ಶಿವಕುಮಾರ್‌– ಕಚೇರಿ ಸಹಾಯಕ, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ

* ಪ್ರಕಾಶ್‌ ಎಸ್‌. ಮರಬಳ್ಳಿ– ಪ್ರಾದೇಶಿಕ ಆಯುಕ್ತ, ಬೆಂಗಳೂರು ವಿಭಾಗ

* ಕೆ. ರಮೇಶ್‌– ತಹಶೀಲ್ದಾರ್‌, ಹೊಸಕೋಟೆ

* ಎಂ.ಕೆ. ರಮೇಶ್‌– ತಹಶೀಲ್ದಾರ್‌, ದೊಡ್ಡಬಳ್ಳಾಪುರ

* ಶಿವರಾಜ್‌– ಚುನಾವಣಾ ತಹಶೀಲ್ದಾರ್‌, ಬೆಂಗಳೂರು ನಗರ ಜಿಲ್ಲೆ

* ಸಿ. ಮಹದೇವಯ್ಯ– ಗೆಜೆಟೆಡ್‌ ಫ್ಯಾಕಲ್ಟಿ, ಡಿಟಿಐ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು