ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019 ಹಿನ್ನೋಟ | ರಾಜ್ಯ ರಾಜಕಾರಣದಲ್ಲಿ ರಾಜಕೀಯ ತಲ್ಲಣಗಳು

Last Updated 26 ಡಿಸೆಂಬರ್ 2019, 7:46 IST
ಅಕ್ಷರ ಗಾತ್ರ

ರಾಜ್ಯ ರಾಜಕಾರಣದಲ್ಲಿ ಗಮನಾರ್ಹ ತಲ್ಲಣಗಳನ್ನು ಮೂಡಿಸಿದ ವರ್ಷವಿದು. 2019ರ ಪ್ರಮುಖ ರಾಜಕೀಯ ವಿದ್ಯಮಾನಗಳು ಇಂತಿವೆ.

ಜನವರಿ 20: ಶಾಸಕರ ಮಾರಾಮಾರಿ:

ಬಿಡದಿ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಮತ್ತು ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮಧ್ಯೆ ಹೊಡೆದಾಟ. ಆನಂದ್‌ ಸಿಂಗ್‌ ಆಸ್ಪತ್ರೆಗೆ ದಾಖಲು.

ಜನವರಿ 21: ಎಚ್‌ಡಿಕೆ ರಾಜೀನಾಮೆ ಬೆದರಿಕೆ:

ಕಾಂಗ್ರೆಸ್‌ ಶಾಸಕರ ವಾಗ್ದಾಳಿ ಮತ್ತು ಟೀಕೆಗಳಿಂದ ಬೇಸರಗೊಂಡ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ

ಫೆಬುವರಿ 6 : ವಿಪ್‌ ಉಲ್ಲಂಘಿಸಿದ ಶಾಸಕರು:

ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣಕ್ಕೆ ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ನ 11 ಶಾಸಕರ ಗೈರು. ಸರ್ಕಾರದ ಪತನದ ಸುಳಿವು.

ಫೆಬ್ರುವರಿ 8: ಆಪರೇಷನ್‌ ಕಮಲ ಆಡಿಯೊ ಬಾಂಬ್‌:

ಜೆಡಿಎಸ್‌ನ ಗುರುಮಠಕಲ್‌ ಶಾಸಕ ನಾಗನಗೌಡ ಪಾಟೀಲ ಅವರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಆಮಿಷ ಒಡ್ಡಿದರು ಎನ್ನಲಾದ ಆಡಿಯೊ ಬಿಡುಗಡೆ ಮಾಡಿದ ಎಚ್‌.ಡಿ.ಕುಮಾರಸ್ವಾಮಿ. ಬಜೆಟ್‌ ಮಂಡನೆಗೆ ಮುನ್ನ ಹೈಡ್ರಾಮಾ.

ಮಾರ್ಚ್ 5: ಉಮೇಶ್‌ ಜಾಧವ್ ರಾಜೀನಾಮೆ:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್‌ನ ಉಮೇಶ್‌ ಜಾಧವ್‌, ಬಿಜೆಪಿ ಸೇರ್ಪಡೆ.

ಜುಲೈ 6: 17 ಶಾಸಕರ ರಾಜೀನಾಮೆ:

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 14 ಶಾಸಕರ ರಾಜೀನಾಮೆ. ಮುಂಬೈಗೆ ತೆರಳಿ ವಾಸ್ತವ್ಯ. 17ಕ್ಕೇರಿದ ಭಿನ್ನರ ಸಂಖ್ಯೆ

ಜುಲೈ 23: ಬಹುಮತ ಕಳೆದುಕೊಂಡ ದೋಸ್ತಿ:

ವಿಶ್ವಾಸಮತ ಯಾಚನೆಯಲ್ಲಿ ಸೋತ ಕುಮಾರಸ್ವಾಮಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ.

ಜುಲೈ 26: ಬಿಎಸ್‌ವೈ ಪ್ರಮಾಣ:

ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ. ಜುಲೈ 29 ರಂದು ಬಹುಮತ ಸಾಬೀತು.

ನವೆಂಬರ್‌ 13: ಶಾಸಕರ ಸ್ಪರ್ಧೆಗೆ ಅನುಮತಿ:

ರಾಜೀನಾಮೆ ನೀಡಿ ಅನರ್ಹಗೊಂಡಿದ್ದ 15 ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್‌ ಅನುಮತಿ.

ಡಿಸೆಂಬರ್‌ 9: ಬಿಜೆಪಿಗೆ ಭರ್ಜರಿ ಗೆಲುವು:

ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿ 117 ಸ್ಥಾನಕ್ಕೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT