ಮಂಗಳವಾರ, ಆಗಸ್ಟ್ 20, 2019
21 °C

ಪಥಸಂಚಲನ: ಹೆಲ್ಮೆಟ್‌ ಧರಿಸಿ ಭಾಗಿಯಾದ ಮಕ್ಕಳು!

Published:
Updated:
Prajavani

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ತಾಲ್ಲೂಕಿನ ಹಲಗಾ ಶಾರದಾ ಶಾಲೆ ವಿದ್ಯಾರ್ಥಿನಿಯರು ಹೆಲ್ಮೆಟ್‌ ಧರಿಸಿ ಭಾಗವಹಿಸಿ ಗಮನಸೆಳೆದರು.

‘ದ್ವಿಚಕ್ರವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ಜಾಗೃತಿ ಮೂಡಿಸುವ ಉದ್ದೇಶದಿಂದ ಹೆಲ್ಮೆಟ್‌ ಹಾಕಿದ್ದೆವು’ ಎಂದು ತಿಳಿಸಿದರು.

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Post Comments (+)