ಪ್ರತ್ಯೇಕ ಕರ್ನಾಟಕದ ಬಗ್ಗೆ ಚಿಂತನೆ: ಪಾಟೀಲ್ ಪುಟ್ಟಪ್ಪ

7

ಪ್ರತ್ಯೇಕ ಕರ್ನಾಟಕದ ಬಗ್ಗೆ ಚಿಂತನೆ: ಪಾಟೀಲ್ ಪುಟ್ಟಪ್ಪ

Published:
Updated:

ಧಾರವಾಡ: ಉತ್ತರ ಕರ್ನಾಟಕಕ್ಕೆ ಇದೇ ರೀತಿ ತಾರತಮ್ಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಧ್ವನಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ್ ಪುಟ್ಟಪ್ಪ ಪುನರುಚ್ಚರಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಬಳ್ಳಾರಿ, ದಾವಣಗೆರೆ, ಕಲಬುರ್ಗಿಯಲ್ಲಿ ಸಭೆ ಮಾಡಬೇಕಿದೆ. ಪ್ರತ್ಯೇಕ ಕರ್ನಾಟಕದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇವೆ’ ಎಂದರು.

‘ಮೈತ್ರಿ ಸರ್ಕಾರ ಕೇವಲ ಮೈಸೂರು ಭಾಗದವರಿಗೆ ನಿರ್ಮಾಣವಾದಂತಿದೆ. ಇದೇ ರೀತಿ ಧೋರಣೆ ಮುಂದುವರೆದರೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ’ ಎಂದರು.

ಮಾಜಿ ಪ್ರಧಾನಿ ದೇವೆಗೌಡರು ನಾಳೆ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಅವರಿಗೆ ಈ ಕುರಿತು ವಿವರಣೆ ನೀಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಬೇಡ. ಆರಂಭದಿಂದಲೇ ಇಂಗ್ಲೀಷ್ ಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ. ಆಸ್ಸಾಂ, ಪಂಜಾಬ್‌, ಕೇರಳ ಹೀಗೆ ಹಲವು ರಾಜ್ಯಗಳಲ್ಲಿ ಇಂಗ್ಲೀಷ್‌ ವ್ಯಾಮೋಹ ಅಂಟಿಕೊಂಡಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಇದರ ನೇತೃತ್ವ ವಹಿಸಿ ಎಲ್ಲ ದೇಶಿ ಭಾಷೆ ನಾಯಕರನ್ನು ಕರೆಯಿಸಿ ಮಾತುಕತೆ ನಡೆಸಲಿ ಬೇಕಾದರೆ ಪ್ರಧಾನಿ ಅವರನ್ನು ಸಭೆಗೆ ಕರೆಸಲಿ ಎಂದು ಒತ್ತಾಯಿಸಿದರು.

ಐದನೇ ತರಗತಿ ನಂತರ ಬೇಕಾದರೆ ಇಂಗ್ಲಿಷ್ ಕಲಿಸಲಿ. ಕನ್ನಡ ಶಾಲೆಗಳನ್ನು ವಿಲೀನ‌ ಮಾಡುವುದಕ್ಕೆ ಒಪ್ಪುವುದಿಲ್ಲ, ಕನ್ನಡ ಭಾಷೆ ಉಳಿವಿಗಾಗಿ ಆಂದೋಲನ ಮುಂದುವರೆಯುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !