ನಿಶ್ಚಿತಾರ್ಥಕ್ಕೆ ಹೊರಟವರು ಮಸಣಕ್ಕೆ

7

ನಿಶ್ಚಿತಾರ್ಥಕ್ಕೆ ಹೊರಟವರು ಮಸಣಕ್ಕೆ

Published:
Updated:
ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿರುವ ಕಾರು

ಮಧುಗಿರಿ: ತಾಲ್ಲೂಕಿನ ತುಮಕೂರು ರಸ್ತೆಯ ಕಾಟಗಾನಹಟ್ಟಿ ಸಮೀಪ ಬುಧವಾರ ಸಂಜೆ ಸಿಮೆಂಟ್ ತುಂಬಿದ್ದ ಲಾರಿ ಮತ್ತು ಮಾರುತಿ ಕಾರಿನ ನಡುವೆ ಡಿಕ್ಕಿ ಸಂಭವಿಸಿ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಮುರುಳಿ (23), ಮಂಜುನಾಥ್ (22), ದಿನೇಶ್ (23), ರಾಮಮೋಹನ್ (22) ಹಾಗೂ ಶಿವಪ್ರಸಾದ್ (22) ಮೃತಪಟ್ಟವರು.

ಪಾವಗಡ ತಾಲ್ಲೂಕು ಕುಂದುರಪಿ ಗ್ರಾಮದಲ್ಲಿ ರಾತ್ರಿ ಸ್ನೇಹಿತನ ನಿಶ್ಚಿತಾರ್ಥ ಕಾರ್ಯಕ್ರಮ ಇತ್ತು. ಇಲ್ಲಿಗೆ ಇವರು ತೆರಳುತ್ತಿದ್ದರು. ಲಾರಿ ತುಮಕೂರಿನತ್ತ ಹೋಗುತ್ತಿತ್ತು. ಲಾರಿ ಚಕ್ರಗಳ ಅಡಿಯಲ್ಲಿ ಕಾರು ಸಿಲುಕಿದ್ದರಿಂದ ಶವಗಳನ್ನು ಹೊರತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಹರ ಸಾಹಸಪಟ್ಟರು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 6

  Sad
 • 0

  Frustrated
 • 1

  Angry

Comments:

0 comments

Write the first review for this !