ಸೋಮವಾರ, ಅಕ್ಟೋಬರ್ 21, 2019
21 °C

ದಸರಾ ಅತಿಥಿಗಳ ಪಾಸ್‌ ಮಾರಾಟಕ್ಕೆ!

Published:
Updated:

ಮೈಸೂರು: ಅರಮನೆ ಆವರಣದ ಜಂಬೂಸವಾರಿ ವೀಕ್ಷಣೆಗಾಗಿ, ಅತಿಥಿಗಳಿಗೆಂದು ನೀಡಿದ್ದ ಪಾಸ್‌ಗಳನ್ನು ಕೆಲವರು ಮಂಗಳವಾರ ಬೆಳಿಗ್ಗೆ ಮಾರಾಟ ಮಾಡುತ್ತಿದ್ದುದು ಕಂಡುಬಂತು.

ವ್ಯಕ್ತಿಯೊಬ್ಬ ಅರಮನೆ ಅಂಬಾವಿಲಾಸ ಗೇಟ್‌ ಬಳಿ ಸಾರ್ವಜನಿಕರಿಗೆ ₹ 2000ಕ್ಕೆ ಪಾಸ್‌ ಮಾರಲು ಮುಂದಾಗಿದ್ದ. ಸಾರ್ವಜನಿಕರು ₹1000ಕ್ಕೆ ಕೊಡುವಂತೆ ಆತನಲ್ಲಿ ಚೌಕಾಸಿ ಮಾಡುತ್ತಿದ್ದರು.

₹4 ಸಾವಿರಕ್ಕೆ ಖರೀದಿ ಮಾಡಿದ ಗೋಲ್ಡ್‌ ಪಾಸ್‌ಗಳನ್ನು ಕೆಲವರು ₹6000ಕ್ಕೆ ಮಾರಾಟ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ‌

ದಸರಾ ಸಮಿತಿಯು ತಮಗೆ ಐದು ಪಾಸ್‌ಗಳನ್ನಷ್ಟೇ ನೀಡಿ ಅವಮಾನಿಸಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರು ಮೇಯರ್‌ ಪುಷ್ಪಲತಾ ಜಗನ್ನಾಥ್‌ ನೇತೃತ್ವದಲ್ಲಿ ಈಚೆಗೆ ಪ್ರತಿಭಟನೆಯನ್ನೂ ನಡೆಸಿದ್ದರು. 

Post Comments (+)