ವಿದ್ಯುತ್‌ ತಂತಿಗೆ ಹುಲಿ ಬಲಿ; ಇಬ್ಬರ ಬಂಧನ

7

ವಿದ್ಯುತ್‌ ತಂತಿಗೆ ಹುಲಿ ಬಲಿ; ಇಬ್ಬರ ಬಂಧನ

Published:
Updated:

ಮೈಸೂರು: ಕೃಷಿ ಭೂಮಿಯ ತಂತಿ ಬೇಲಿಗೆ ನೀಡಿದ್ದ ವಿದ್ಯುತ್ ಸಂಪರ್ಕದ ಆಘಾತದಿಂದ ಹುಲಿಯೊಂದು ಮೃತಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಕರ್ಪೂರ ಗ್ರಾಮದ ನಿವಾಸಿಗಳಾದ ಜಯಣ್ಣ, ಕೃಷ್ಣೇಗೌಡ ಬಂಧಿತರು.

ಜಮೀನಿನ ರಕ್ಷಣೆ, ಹಂದಿ ಬೇಟೆಗಾಗಿ ರಾತ್ರಿ ವೇಳೆ ಜಮೀನಿನ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರು. ಈ ವೇಳೆ ಹುಲಿ ಸಿಲುಕಿ ಮೃತಪಟ್ಟಿತು. ಮೃತದೇಹವನ್ನು ಕಬಿನಿ ಹಿನ್ನೀರಿಗೆ ಎಸೆದಿದ್ದರು. ಹುಲಿಯ ಉಗುರನ್ನು ಇವರೇ ಕಿತ್ತು ಹಾಕಿದ್ದಾರೆಯೆ ಎನ್ನುವ ಕುರಿತು ವಿಚಾರಣೆ ನಡೆಯುತ್ತಿದೆ.

‘ಕಬಿನಿ ಹಿನ್ನೀರಿನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿತ್ತು. ವಿದ್ಯುತ್ ಆಘಾತದಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತ
ವಾಗಿತ್ತು. ತಂತಿ ಬೇಲಿಗೆ ನೀಡಿದ್ದ ವಿದ್ಯುತ್ ಸಂಪರ್ಕವೇ ಇದಕ್ಕೆ ಕಾರಣ ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !