ಭಾನುವಾರ, ಸೆಪ್ಟೆಂಬರ್ 22, 2019
23 °C

ಪಿಲಿಕುಳ: ಐದು ಮರಿಗಳಿಗೆ ಜನ್ಮ ನೀಡಿದ `ರಾಣಿ' ಹುಲಿ

Published:
Updated:
Prajavani

ಬಜ್ಪೆ: ಮಂಗಳೂರು ತಾಲ್ಲೂಕಿನ ವಾಮಂಜೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಎಂಟು ವರ್ಷದ ‘ರಾಣಿ' ಹೆಸರಿನ ಹುಲಿ ಐದು ಮರಿಗಳಿಗೆ ಜನ್ಮ ನೀಡಿದೆ.

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳಕ್ಕೆ ‘ರಾಣಿ’ಯನ್ನು ಈಚೆಗೆ ತರಲಾಗಿತ್ತು. ಮರಿಗಳು ಆರೋಗ್ಯವಾಗಿದ್ದು, ರೋಗ ನಿರೋಧಕ ಲಸಿಕೆ ನೀಡಿದ ಬಳಿಕ ಉದ್ಯಾನ ಸಂದರ್ಶಕರಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಶೀಘ್ರವೇ ತಿರುವನಂತಪುರಂ ಮೃಗಾಲಯದಿಂದ ರಿಯಾ ಪಕ್ಷಿ ಹಾಗೂ ತಿರುಪತಿ ಮೃಗಾಲಯದಿಂದ ಹುಲಿಗಳನ್ನು ತರಲಾಗುವುದು ಎಂದು  ಅವರು ತಿಳಿಸಿದ್ದಾರೆ.

ಇಲ್ಲಿಗೆ ವಿಶಾಖಪಟ್ಟಣಂ ಮೃಗಾಲಯದಿಂದ ತರಲಾಗಿರುವ ಸೀಳುನಾಯಿ(ದೋಳ್)ಯೂ ಮೂರು ಮರಿಗಳಿಗೆ ಜನ್ಮ ನೀಡಿದೆ.

Post Comments (+)