ಹೆದ್ದಾರಿಯಲ್ಲಿ ಹುಲಿ ಪ್ರತ್ಯಕ್ಷ !

7

ಹೆದ್ದಾರಿಯಲ್ಲಿ ಹುಲಿ ಪ್ರತ್ಯಕ್ಷ !

Published:
Updated:
Deccan Herald

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಗಡಿ ಭಾಗದ ವಡಗಟ್ಟಾ ಚೆಕ್‌ಪೋಸ್ಟ್‌ ಸಮೀಪದ ತಿರುವಿನಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ಎರಡು ದಿನಗಳ ಹಿಂದೆ ಹುಬ್ಬಳ್ಳಿ– ಶಿರಸಿ ರಾಜ್ಯ ಹೆದ್ದಾರಿ ಬದಿಯ ನೀಲಗಿರಿ ತೋಪಿನಿಂದ ಬಂದು, ರಸ್ತೆ ಪಕ್ಕ ನಿಂತಿರುವುದನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕೆಲ ಹೊತ್ತು ಅಲ್ಲಿಯೇ ನಿಂತಿದ್ದ ಹುಲಿಯು, ನಂತರ ವಾಹನಗಳ ಬೆಳಕಿನಲ್ಲಿ ರಸ್ತೆಯ ಇನ್ನೊಂದು ಬದಿಯತ್ತ ಹೆಜ್ಜೆ ಹಾಕಿದೆ.

ವಡಗಟ್ಟಾ ಸನಿಹದ ಅರಣ್ಯ ಪ್ರದೇಶದಲ್ಲಿ ಹುಲಿ ಇರುವುದನ್ನು ದನಗಾಹಿಯೊಬ್ಬ ಇತ್ತೀಚೆಗೆ ನೋಡಿ ಚೀರಿಕೊಂಡಿದ್ದ.

ಗದ್ದೆಯಲ್ಲಿದ್ದ ರೈತರು ಹೋಗುವಷ್ಟರಲ್ಲಿ ಹುಲಿ ಅರಣ್ಯದೊಳಗೆ ಸೇರಿತ್ತು. ಇದಾದ ಒಂದೆರೆಡು ದಿನಗಳಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ರಾಜ್ಯ ಹೆದ್ದಾರಿಯಲ್ಲಿಯೇ ಹುಲಿ ಸಂಚರಿಸಿರುವುದು ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

‘ಆತಂಕ ಸೃಷ್ಟಿಸಿರುವ ಈ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು' ಎಂದು ವಡಗಟ್ಟಾ ಗ್ರಾಮದ ಮುಖಂಡ ಕೆ.ರಾಜು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !