ಮೈಸೂರು: ಹುಲಿ ಚರ್ಮ ವಶ

7

ಮೈಸೂರು: ಹುಲಿ ಚರ್ಮ ವಶ

Published:
Updated:
Deccan Herald

ಮೈಸೂರು: ತಾಲ್ಲೂಕಿನ ಇಲವಾಲ ಸಮೀಪ ಹುಲಿ ಚರ್ಮ ಮಾರಾಟಮಾಡಲು ಯತ್ನಿಸಿದ ಪಿರಿಯಾಪಟ್ಟಣ ತಾಲ್ಲೂಕು ಚೌತಿ ಗ್ರಾಮದ ಗೋವಿಂದೇಗೌಡ ಎಂಬುವರನ್ನು ಅರಣ್ಯ ಸಂಚಾರ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಜತೆಯಲ್ಲಿದ್ದ ಇತರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ದೊಡ್ಡ ಗಾತ್ರದ ಹುಲಿ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.

ಪಿರಿಯಾಪಟ್ಟಣದ ಚೌತಿ ಗ್ರಾಮದ ಬಳಿ ಜಮೀನಿನಲ್ಲಿ ಕಾಡು ಹಂದಿಗಾಗಿ ಉರುಳು ಹಾಕಲಾಗಿತ್ತು. ಆದರೆ ಹುಲಿಯೊಂದು ಸಿಲುಕಿ ಮೃತಪಟ್ಟಿತು. ಆರೋಪಿಯು ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕಾಡಿನೊಳಗೆ ಹುಲಿಯ ಮೃತದೇಹವನ್ನು ತೆಗೆದುಕೊಂಡು ಹೋಗಿ ಚರ್ಮ ಸುಲಿದು ಮನೆಯಲ್ಲಿ ಇಟ್ಟುಕೊಂಡಿದ್ದರು. ಮಾರಾಟ ಮಾಡಲು ಹಲವು ದಲ್ಲಾಳಿಗಳನ್ನು ಸಂಪರ್ಕಿಸಿದ್ದರು.

ಮಾಹಿತಿ ಪಡೆದ ಪೊಲೀಸರು, ಮಾಹಿತಿದಾರರೊಬ್ಬರನ್ನೇ ದಲ್ಲಾಳಿ ರೂಪದಲ್ಲಿ ಆರೋಪಿಯ ಬಳಿಗೆ ಕಳುಹಿಸಿ ವ್ಯಾಪಾರ ಕುದುರಿಸಿದರು. ಇಲವಾಲ ಸಮೀಪ ನಿರ್ಜನ ಪ್ರದೇಶದಲ್ಲಿ ಚರ್ಮ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !