ಶುಕ್ರವಾರ, ನವೆಂಬರ್ 15, 2019
27 °C

ಟಿಪ್ಪು ಜಯಂತಿ: ನಿರ್ಧಾರ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Published:
Updated:
prajavani

ಬೆಂಗಳೂರು: ‘ಟಿಪ್ಪು ಜಯಂತಿ  ಆಚರಣೆಯನ್ನು ಪುನರ್ ಪರಿಶೀಲನೆ ಮಾಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

ಎರಡು ತಿಂಗಳ ಒಳಗಾಗಿ ಈ ಬಗ್ಗೆ ಕೂಲಂಕಷ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಿ.ಖಾಸಗಿಯಾಗಿ ಯಾರಾದರೂ ಆಚರಣೆ ಮಾಡಬಯಸಿದರೆ ಅವರಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಸೂಚಿಸಿದೆ.

ಬೇರೆ ಪ್ರಮುಖರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಹಾಗೂ ಆ ಕುರಿತು ಕೈಗೊಳ್ಳಲಾಗಿರುವ ಆದೇಶಗಳ ಬಗ್ಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿ ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಅಂತಿಮ ವಿಚಾರಣೆಯನ್ನು 2020ರ ಜನವರಿ 20ಕ್ಕೆ ಮುಂದೂಡಲಾಗಿದೆ‌.

ಪ್ರತಿಕ್ರಿಯಿಸಿ (+)