ಟಿಪ್ಪು ಜಯಂತಿ ಕರ್ನಾಟಕದಲ್ಲಿ ಆಚರಿಸದೇ ಇನ್ನೆಲ್ಲಿ ಆಚರಿಸಲು ಸಾಧ್ಯ?

7

ಟಿಪ್ಪು ಜಯಂತಿ ಕರ್ನಾಟಕದಲ್ಲಿ ಆಚರಿಸದೇ ಇನ್ನೆಲ್ಲಿ ಆಚರಿಸಲು ಸಾಧ್ಯ?

Published:
Updated:

ಬೆಳಗಾವಿ: ಟಿಪ್ಪು ಸುಲ್ತಾನ್ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸದೇ ಬೇರೆ ಕಡೆ ಆಚರಿಸಲಾದೀತೇ? ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು ಹುಟ್ಟಿದ್ದು, ಬೆಳೆದದ್ದು ಹಾಗೂ ಆಡಳಿತ ನಡೆಸಿದ್ದು ಇಲ್ಲಿ. ಭಾರತಕ್ಕೆ ಕೀರ್ತಿ ತಂದವರು. ತಾನಲ್ಲದೇ ತನ್ನ ಮಕ್ಕಳನ್ನೂ ರಾಜ್ಯಕ್ಕಾಗಿ ಬಲಿದಾನ ನೀಡಿದವರು. ಹಿಂದಿನ ಸರ್ಕಾರದಲ್ಲೂ ಅವರ ಜಯಂತಿ ಆಚರಿಸಲಾಗಿತ್ತು. ಈ ಬಾರಿಯೂ ಮುಂದುವರಿಸಿದ್ದೇವೆ. ಕೇವಲ್ಲ ಹೇಳಲಿಲ್ಲ; ನಡೆಸಿ ತೋರಿಸಿದ್ದೇವೆ ಎಂದು ಹೇಳಿದರು.

ಕೆಲವರು ಈ ವಿಷಯದಲ್ಲಿ ಬೇಕೆಂದೇ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಟಿಪ್ಪು ವಿಷಯದಲ್ಲಿ ದಶಕಗಳ ಕಾಲದಿಂದಲೂ ಸಂಶೋಧನೆ ಮಾಡಿದವರು ಹಾಗೂ ಟಿಪ್ಪು ಜಯಂತಿ ಆಚರಣೆ ವಿರೋಧಿಸುವವರ ನಡುವೆ ಚರ್ಚೆಯಾಗಲಿ. ಎಲ್ಲ ರಾಜ, ಮಹಾರಾಜರು ಕೂಡ ಮತ್ತೊಬ್ಬರನ್ನು ಕೊಂದು ಮುಂದೆ ಬಂದವರೇ. ಎಲ್ಲರೂ ಸಂತೋಷದಿಂದ, ನಗುನಗುತ್ತಾ ಯುದ್ಧ ಗೆದ್ದವರಲ್ಲ. ಇಂತಹ ವಿಷಯಗಳನ್ನು ವಿವಾದ ಮಾಡುವುದಕ್ಕಿಂತ ಎಲ್ಲರೂ ಸೇರಿ ಚರ್ಚೆ ನಡೆಸಿ ಮುಂದಿನ ಪೀಳಿಗೆಗೆ ಸ್ಪಷ್ಟತೆ ಉಳಿಸಬೇಕು ಎಂದರು.

ಸಂವಿಧಾನವು ಹೆಣ್ಣಿಗೆ ರಕ್ಷಣೆ ನೀಡಿದೆ. ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೂಡ ಅದನ್ನೇ ಹೇಳಿದೆ. ನಮ್ಮ ಹಕ್ಕು ನಮಗೆ ಸಿಗಬೇಕು. ಅದಕ್ಕಾಗಿ ಸುಪ್ರೀಂ ಕೋರ್ಟ್ ತೀರ್ಪು ಪಾಲನೆಯಾಗಬೇಕು. ಹೆಣ್ಣು- ಗಂಡಿಗೆಂದು ಪ್ರತ್ಯೇಕ ದೇವರುಗಳಿಲ್ಲ. ಎಲ್ಲರಿಗೂ ಪ್ರವೇಶ ಅವಕಾಶ ದೊರೆಯಬೇಕು. ಹಲವು ವರ್ಷಗಳಿಂದಲೂ ಇದನ್ನೇ ಪ್ರತಿಪಾದಿಸುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬುದಿಲ್ಲ. ಅಖಂಡ ಕರ್ನಾಟಕ ಮಾತ್ರ ಇದೆ. ನಮ್ಮ ಸರ್ಕಾರ ಎಲ್ಲ ಭಾಗದ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡುತ್ತಿದೆ. ಬೆಂಗಳೂರಿನಲ್ಲೂ ರಾಣಿ ಚನ್ನಮ್ಮ ಜಯಂತಿ ಆಚರಿಸಿದೆವು. ಹೀಗಾಗಿ ಅಂದೇ ಇಲ್ಲಿನ ಕಿತ್ತೂರಿನಲ್ಲೂ ಇದ್ದ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗಲಿಲ್ಲ. ಅದಕ್ಕೆ ಅಪಾರ್ಥ ಕಲ್ಪಿಸುವುದು ಅಥವಾ ಉತ್ತರ ಕರ್ನಾಟಕ ವಿರೋಧಿ ಎಂದು ಆರೋಪಿಸುವುದು ಸರಿಯಲ್ಲ ಎಂದರು.

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !