ಮಂಗಳೂರಿನಲ್ಲಿ ಪ್ರತಿಭಟನೆ;ಬಜರಂಗದಳ, ಶ್ರೀರಾಮ ಸೇನೆ, ವಿಎಚ್‌ಪಿ ಕಾರ್ಯಕರ್ತರ ಬಂಧನ

7

ಮಂಗಳೂರಿನಲ್ಲಿ ಪ್ರತಿಭಟನೆ;ಬಜರಂಗದಳ, ಶ್ರೀರಾಮ ಸೇನೆ, ವಿಎಚ್‌ಪಿ ಕಾರ್ಯಕರ್ತರ ಬಂಧನ

Published:
Updated:

ಮಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಜಿಲ್ಲಾ ಪಂಚಾಯಿತಿ ಬಳಿಯ ಗಣಪತಿ ದೇವಸ್ಥಾನದ ಬಳಿ ಪ್ರತಿಭಟನಾ ಮೆರವಣಿಗೆ ಹೊರಡಲು ಯತ್ನಿಸಿದ ಬಜರಂಗದಳ, ಶ್ರೀರಾಮ ಸೇನೆ ಮತ್ತು ವಿಎಚ್ಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಹುಸಂಖ್ಯಾತರ ವಿರೋಧದ ನಡುವೆಯೂ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಓಲೈಕೆ ರಾಜಕಾರಣ ಮಾಡಲು ಮುಂದಾಗಿದೆ. ಈ ಆಚರಣೆಯನ್ನು ಕೈ ಬಿಡಬೇಕು ಎಂದು ಬಜರಂಗ ದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿದರು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಯಿತು.

ಕಚೇರಿ ಹೊರಭಾಗದ ಗೇಟ್‌ನ ಬಳಿ ಕಪ್ಪು ಬಾವುಟ ಹಿಡಿದು ಟಿಪ್ಪು ಜಯಂತಿಗೆ ಧಿಕ್ಕಾರ ಕೂಗುತ್ತ ಬಿಜೆಪಿ ಮುಖಂಡ ಫ್ರಾಂಕ್ಲಿನ್ ಮೊಂತೆರೊ ಬಂದಾಗ ಪೊಲೀಸರು ತಡೆದರು.

ಹಿಂದೂಪರ ಸಂಘಟನೆ ಮತ್ತು ಬಿಜೆಪಿ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಉಸ್ತುವಾರಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ವಿದೇಶ ಪ್ರವಾಸದಲ್ಲಿರುವ ಕಾರಣ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲೇ ಜಯಂತಿ ಆಚರಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !