ಗ್ರಾಹಕರಿಗೆ 9 ಕೋಟಿ ವಂಚಿಸಿದ ಕಂಪನಿ

7

ಗ್ರಾಹಕರಿಗೆ 9 ಕೋಟಿ ವಂಚಿಸಿದ ಕಂಪನಿ

Published:
Updated:

ಮಂಗಳೂರು: ತಿರುಪುರ ಚಿಟ್ಸ್ ಪ್ರೈ ಲಿಮಿಟೆಡ್ ಹೆಸರಿನ ಕಂಪನಿ ದಕ್ಷಿಣ ಕನ್ನಡದ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ. 200ಕ್ಕೂ ಹೆಚ್ಚು ಗ್ರಾಹಕರಿಂದ ₹ 9 ಕೋಟಿ ಹಣ ಸಂಗ್ರಹಿಸಿ ಮೋಸ ಮಾಡಿರುವ ಬಗ್ಗೆ ಎಕನಾಮಿಕ್‌ ಅಂಡ್‌ ನಾರ್ಕೊಟಿಸ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚೆನ್ನೈ ಮೂಲದ ಈ ಕಂಪನಿ ನಡೆಸಿದ ವಂಚನೆಯ ಬಗ್ಗೆ ಅರಾಫತ್‌ ಎಂಬವರು ದೂರು ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬಂಟ್ಸ್‌ ಹಾಸ್ಟೆಲ್‌ನಲ್ಲಿ ಈ ಕಂಪನಿಯ ಕಚೇರಿ ತೆರೆದು ಗ್ರಾಹಕರಿಗೆ ಬೃಹತ್‌ ಮೊತ್ತದ ಬಡ್ಡಿಯ ಆಮಿಷ ತೋರಿಸಿ ಹಣ ಸಂಗ್ರಹಿಸಲಾಗಿದೆ. ಮೊದಲು ಸರಿಯಾದ ಸಮಯಕ್ಕೆ ಹಣ ಮರಳಿಸಿದ ಕಂಪನಿ ಬಳಿಕ ಕಚೇರಿಗೆ ಬೀಗ ಹಾಕಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. 

ರಾಜ್ಯದಲ್ಲಿ 34 ಶಾಖೆ ಸೇರಿದಂತೆ ದೇಶಾದ್ಯಂತ 150ಕ್ಕೂ ಅಧಿಕ ಶಾಖೆಗಳನ್ನು ಈ ಕಂಪನಿ ಹೊಂದಿದ್ದು, ಮಂಗಳೂರಿನ 200ಕ್ಕೂ ಅಧಿಕ ಗ್ರಾಹಕರಿಂದ ಹಣ ಸಂಗ್ರಹಿಸಲಾಗಿದೆ ಎಂದು  ದೂರಿನಲ್ಲಿ ವಿವರಿಸಿದ್ದಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕರು, ಸಿಬ್ಬಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದೆ.  ಈ ಕಂಪನಿಯ ನಿರ್ದೇಶಕಿ ಸುಮನಾ ಮಂಗಳೂರು ಮೂಲದವರೆಂದು ತಿಳಿದು ಬಂದಿದೆ.  

ಅರಾಫತ್‌ ₹ 50 ಲಕ್ಷ ಹಣ ತೊಡಗಿಸಿದ್ದು, ಮಂಗಳೂರು ಕಚೇರಿ ಮುಚ್ಚಿದ ಸುದ್ದಿ ತಿಳಿದ ಕೂಡಲೆ ಚೆನ್ನೈಗೆ ಹೋಗಿ ವಿಚಾರಿಸಿದ್ದರು. ಅಲ್ಲಿಯೂ ಕಚೇರಿಗೆ ಬೀಗ ಹಾಕಿರುವುದು ತಿಳಿದುಬಂದಾಗ ಮೋಸಹೋಗಿರುವುದು ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !