ಪರೀಕ್ಷೆ ವಂಚಿತರಾದ ನೂರಾರು ಉದ್ಯೋಗ ಆಕಾಂಕ್ಷಿಗಳು

7
ತಡವಾಗಿ ಸಂಚರಿಸಿದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್

ಪರೀಕ್ಷೆ ವಂಚಿತರಾದ ನೂರಾರು ಉದ್ಯೋಗ ಆಕಾಂಕ್ಷಿಗಳು

Published:
Updated:

ಹುಬ್ಬಳ್ಳಿ: ಇಲ್ಲಿಂದ ಬೆಂಗಳೂರಿಗೆ ಶನಿವಾರ ಹೊರಡಬೇಕಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಭಾನುವಾರ ಬೆಳಿಗ್ಗೆ ಹೊರಟ ಕಾರಣ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪರೀಕ್ಷೆ ಬರೆಯಲು ರಾಜಧಾನಿಗೆ ಹೊರಟ್ಟಿದ್ದ ನೂರಾರು ಉದ್ಯೋಗ ಆಕಾಂಕ್ಷಿಗಳು ಅವಕಾಶ ಕಳೆದುಕಳ್ಳುವಂತಾಗಿದೆ.

ರೈಲ್ವೆ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉದ್ಯೋಗ ಆಕಾಂಕ್ಷಿಗಳು ಪ್ರತಿಭನಟನೆ ನಡೆಸಿದರು. ಸರಿಯಾಗಿ ಮಾಹಿತಿ ನೀಡದ, ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಲ್ಹಾಪುರದಿಂದ ಹುಬ್ಬಳ್ಳಿ, ಮೈಸೂರು ಮಾರ್ಗವಾಗಿ ಬೆಂಗಳೂರು ತಲುಪುವ ರೈಲು ರಾತ್ರಿ 10.40ಕ್ಕೆ ಸರಿಯಾಗಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಡಬೇಕಿತ್ತು. ಧಾರವಾಡದ ಕಂಬಾರಗಣವಿ ಸಮೀಪ ರಾತ್ರಿ ಗೂಡ್ಸ್ ರೈಲು ಎಂಜಿನ್ ವಿಫಲವಾಗಿ ಕೆಟ್ಟು ನಿಂತಿದ್ದ ಕಾರಣ, ಅದೇ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರೈಲು ಹುಬ್ಬಳ್ಳಿ ನಿಲ್ದಾಣ ತಲುಪಲಿಲ್ಲ.

ರಾಣಿ ಚನ್ನಮ್ಮ ರೈಲಿನ ಎಂಜಿನ್ ಅನ್ನು ಗೂಡ್ಸ್ ರೈಲಿಗೆ ಅಲವಡಿಸಿ ಮುಂದಕ್ಕೆ ಕೊಂಡೊಯ್ಯಲಾಯಿತು. ಮಾರ್ಗ ಮುಕ್ತವಾದ ನಂತರ ಪ್ಯಾಸೆಂಜರ್ ರೈಲು ಹುಬ್ಬಳ್ಳಿ ತಲುಪಿತು. ಅಷ್ಟು ಹೊತ್ತಿಗಾಗಲೇ ಐದು ಗಂಟೆ ತಡವಾಗಿತ್ತು. ಅಂತಿಮವಾಗಿ ರೈಲು ಬೆಳಿಗ್ಗೆ ಆರು ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟಿತು.

‘ನಸುಕಿನ 1.10ರ ಸುಮಾರಿಗೆ ಎಂಜಿನ್ ಅನ್ನು ರಾಣಿ ಚನ್ನಮ್ಮ ರೈಲಿಗೆ ಜೋಡಿಸಲು ಮುಂದಾದ ಸಿಬ್ಬಂದಿಯನ್ನು ಪ್ರತಿಭಟನಾಕಾರರು ತಡೆದರು. ಪರಿಣಾಮ ಇನ್ನಷ್ಟು ತಡವಾಯಿತು. ವಾಸ್ತವವಾಗಿ ರೈಲು ಒಂದೂಕಾಲು ಗಂಟೆ ಮಾತ್ರ ತಡವಾಗಿತ್ತು. ಪ್ರಯಾಣಿಕರು ಪ್ರತಿಭಟನೆ ಮಾಡದೆ ಸಹಕಾರ ನೀಡಿದ್ದರೆ, ನಿಗದಿಯಂತೆಯೇ ರೈಲು ಬೆಳಿಗ್ಗೆ 8 ಗಂಟೆಗೆ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಲಾಗುತ್ತಿತ್ತು’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯ ತಿಳಿಸಿದ್ದಾರೆ.

ರಾಣಿ ಚನ್ನಮ್ಮ ರೈಲು ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ರೈಲು ತಡವಾಗಲು ಕಾರಣ ತಿಳಿಯಲು ಇಲಾಖಾ ತನಿಖೆ ನಡೆಸಲಾಗುವುದು. ತಪ್ಪು ನಮ್ಮಿಂದ ಆಗಿದ್ದರೂ, ಮರು ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳ ಬೇಡಿಕೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸಹ ಮನವಿ ಮಾಡಲಾಗುವುದು ಎಂದು ವಿಭಾಗೀಯ ಪ್ರಾದೇಶಿಕ ವ್ಯವಸ್ಥಾಪಕ ರಾಜೇಶ್ ಮೋಹನ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !