ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ: ವೇತನ ರಹಿತ ವಿಶೇಷ ರಜೆ ಮಂಜೂರಿಗೆ ಚಿಂತನೆ

Last Updated 9 ಜುಲೈ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು:ನಷ್ಟದ ಸುಳಿಯಲ್ಲಿರುವ ಸಾರಿಗೆ ಸಂಸ್ಥೆಗಳು, ಅಧಿಕಾರಿ ಮತ್ತು ನೌಕರರಿಗೆ ವೇತನ ರಹಿತ ಒಂದು ವರ್ಷದ ತನಕ ರಜೆ ನೀಡಲು ಚಿಂತನೆ ನಡೆಸಿವೆ.

ಕೊರೊನಾ ಸೋಂಕು ಹರಡುತ್ತಿರುವುದರಿಂದ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ. ನೌಕರರ ಆರೋಗ್ಯ ಮತ್ತು ನಿಗಮಗಳ ಆರ್ಥಿಕ ದೃಷ್ಟಿಯಿಂದ ಷರತ್ತುಗಳೊಂದಿಗೆ ಒಂದು ವರ್ಷದ ವಿಶೇಷ ರಜೆ ಮಂಜೂರು ಮಾಡಲು ಆಲೋಚನೆ ನಡೆಸಿವೆ.

ಈ ಸಂಬಂಧ ಅಭಿಪ್ರಾಯ ಕೇಳಿ ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ.

‘ರಜೆ ಪಡೆದವರ ಹುದ್ದೆಯ ಹಕ್ಕು ನಿಗಮದಲ್ಲೇ ಉಳಿಯಲಿದೆ.ಸಿಬ್ಬಂದಿ ಕೋರಿದರೆ ಮಾತ್ರ ರಜೆ ಮಂಜೂರು ಮಾಡಬಹುದು’ ಎಂದಿದ್ದಾರೆ.

‘ಇದು ಹೊಸ ಪದ್ಧತಿಯಲ್ಲ. ಹೆಚ್ಚಿನ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆಯಿಂದ ಅರ್ಜಿ ಸಲ್ಲಿಸಿದವರಿಗೆ 5 ವರ್ಷಗಳ ತನಕ ವಿಶೇಷ ರಜೆ ಮಂಜೂರು ಮಾಡಲು ಅವಕಾಶ ಇತ್ತು. ನೌಕರರ ಮೇಲೆ ಒತ್ತಡ ಹೇರಿ ರಜೆ ನೀಡುವುದಿಲ್ಲ. ಬಯಸಿದವರಿಗಷ್ಟೇ ರಜೆ ಮಂಜೂರು ಮಾಡಲಾಗುವುದು. ಈ ಸಂಬಂಧ ಇನ್ನೂ ಆದೇಶ ಆಗಿಲ್ಲ,ಅಭಿಪ್ರಾಯ ಕೇಳಲಾಗಿದೆ ಅಷ್ಟೆ’ ಎಂದು ಕಳಸದ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT