ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೈಲು ಹಳಿ ಮೇಲೆ ಬಿದ್ದ ಮರ, ತಪ್ಪಿದ ಅನಾಹುತ

Last Updated 30 ಜೂನ್ 2019, 15:30 IST
ಅಕ್ಷರ ಗಾತ್ರ

ಖಾನಾಪುರ/ಬೆಳಗಾವಿ: ತಾಲ್ಲೂಕಿನ ನಾಗರಗಾಳಿ–ತಾವರಗಟ್ಟಿ ರೈಲು ನಿಲ್ದಾಣಗಳ ನಡುವಿನ ಅರಣ್ಯದಲ್ಲಿ ಸಾಗುವ ಎರಡೂ ಹಳಿಗಳ ಮೇಲೆ ಭಾನುವಾರ ಸುರಿಯುತ್ತಿದ್ದ ಮಳೆಯ ನಡುವೆ ಮರವೊಂದು ಉರುಳಿಬಿದ್ದಿತ್ತು. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ.

ಸಣ್ಣದೊಂದು ಕೊಂಬೆ ಮೇಲೆ ರೈಲು ಮುಂದಕ್ಕೆ ಹರಿದಿದೆ. ಅದನ್ನು ಗಮನಿಸಿದ ಲೋಕೊಪೈಲೆಟ್‌, ರೈಲು ನಿಲ್ಲಿಸಿದರು ಎಂದು ತಿಳಿದುಬಂದಿದೆ. ಅದೇ ಮಾರ್ಗದ ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ರೈಲನ್ನು ತಡೆದ ರೈಲ್ವೆ ಸಿಬ್ಬಂದಿ, ಅನಾಹುತ ತಪ್ಪಿಸಿದ್ದಾರೆ. ಮೀರಜ್‌ ಕಡೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಬರುತ್ತಿದ್ದ ಕೊಲ್ಹಾಪುರ–ಮಾಂಗೂರ್ ರೈಲಿನ ಎಂಜಿನ್‌ ಕೆಳಭಾಗದಲ್ಲಿ ಕೊಂಬೆ ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ತೆರವುಗೊಳಿಸಲಾಯಿತು. ಈ ವೇಳೆ, ಎರಡೂ ರೈಲುಗಳು ಎದುರು–ಬದುರು ನಿಂತಿದ್ದವು. ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಯೊಂದಿಗೆ ಪ್ರಯಾಣಿಕರೂ ಭಾಗವಹಿಸಿದ್ದರು.

ಹುಬ್ಬಳ್ಳಿ ಕಡೆಯಿಂದ ಹೋಗುತ್ತಿದ್ದ ರೈಲು 48 ನಿಮಿಷ ಹಾಗೂ ಮೀರಜ್ ಕಡೆಯಿಂದ ಬರುತ್ತಿದ್ದ ರೈಲು 2 ತಾಸು ತಡವಾಗಿ ಚಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT