ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಆಕರ್ಷಣೆಗೆ ಪಿಂಕ್ ಮತಗಟ್ಟೆ

ರಾಮನಗರ ಜಿಲ್ಲೆಯ 15 ಕಡೆ ಸ್ಥಾಪನೆ: ಗುಲಾಬಿ ಬಣ್ಣದ ಶೃಂಗಾರ, ಹಬ್ಬದ ವಾತಾವರಣ
Last Updated 12 ಮೇ 2018, 7:22 IST
ಅಕ್ಷರ ಗಾತ್ರ

ರಾಮನಗರ: ಚುನಾವಣಾ ಆಯೋಗವು ಈ ಬಾರಿ ನಗರ ಪ್ರದೇಶಗಳಲ್ಲಿ ಪಿಂಕ್ ಮತಗಟ್ಟೆಗಳ ಸ್ಥಾಪನೆ ಮೂಲಕ ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸಲು ಪ್ರಯತ್ನ ಮಾಡಿದೆ.

ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಇಂತಹ ವಿಶೇಷ ಮತಗಟ್ಟೆಗಳನ್ನು ಪರಿಚಯಿಸಲಾಗಿದ್ದು, ಸಖಿ ಎಂದೂ ಈ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳು ಸ್ಥಾಪನೆಯಾಗಿವೆ.

ವಿಶೇಷತೆ: ಈ ಮತಗಟ್ಟೆಗಳಲ್ಲಿ ಹಬ್ಬದ ವಾತಾವರಣವನ್ನು ಕಲ್ಪಿಸಲಾಗಿದೆ. ಮತಗಟ್ಟೆಯ ಮುಂಭಾಗ, ಬಾಗಿಲುಗಳು ಸಂಪೂರ್ಣ ಪಿಂಕ್ ಆಗಿವೆ. ಮತಗಟ್ಟೆಗಳಲ್ಲಿನ ಟೇಬಲ್ ಗಳ ಮೇಲೆ ಪಿಂಕ್ ಬಣ್ಣದ ಬಟ್ಟೆಯನ್ನು ಹಾಕಲಾಗಿದೆ. ಇಲ್ಲಿನ
ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮತ್ತು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ. ಇವರೆಲ್ಲರೂ ಅಂದು ಪಿಂಕ್ ಬಣ್ಣದ ವಸ್ತ್ರವನ್ನು ಧರಿಸಿ ಕಾರ್ಯನಿರ್ವಹಿಸಲಿದ್ದಾರೆ.

ಈ ಮತಗಟ್ಟೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲರಿಗೆ ರ್‍ಯಾಂಪ್‌, ವೀಲ್ಹ್ ಚೇರ್ ಮತ್ತು ಸಹಾಯ
ಕರನ್ನು ನಿಯೋಜಿಸಲಾಗಿದೆ. ಜತೆಗೆ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಔಷಧಿ ವ್ಯವಸ್ಥೆ ಕೂಡ ಇರಲಿದ್ದು, ಆಕರ್ಷಣೆಗಾಗಿ ಪಿಂಕ್ ಬಣ್ಣದ ಬಲೂನ್‍ ಗಳಲ್ಲಿ ಆರ್ಚ್‍ ಗಳನ್ನು ರಚಿಸಲಾಗಿದೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರ ವಿಶ್ರಾಂತಿಗಾಗಿ ಸಣ್ಣ ಸಣ್ಣ ಪೆಂಡಾಲ್‍ ಗಳನ್ನು ನಿರ್ಮಿಸಲಾಗಿದೆ.

ಪಿಂಕ್‌ ಮತಗಟ್ಟೆಗಳ ವಿವರ: ಮಾಗಡಿ: ಪುರಸಭೆ ಕಚೇರಿ ಕೊಠಡಿ ಸಂಖ್ಯೆ 1 ಮತ್ತು 2.

ರಾಮನಗರ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 5, ಬಾಲಕರ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಬಿಇಒ ಕಚೇರಿ ಹತ್ತಿರ- ಕೊಠಡಿ ಸಂಖ್ಯೆ 1, ಯಾರಬ್ ನಗರದ ಮರಿಯಮ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕೊಠಡಿ ಸಂಖ್ಯೆ 1, ಮಲ್ಲೇಶ್ವರ ಬಡಾವಣೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿ ಸಂಖ್ಯೆ 1, ಅರ್ಚಕರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಕನಕಪುರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಪಸಂದ್ರ, ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಕೊಠಡಿ ಸಂಖ್ಯೆ 1 ಮತ್ತು 2, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸದೊಡ್ಡಿ.

ಚನ್ನಪಟ್ಟಣ: ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1, ಹಳೆ ನಗರಸಭೆ ಕಚೇರಿ, ಬಿ.ಎಂ. ರಸ್ತೆಯಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಡಬದಿಯ ಕೊಠಡಿ ಸಂಖ್ಯೆ 1 ಹಾಗೂ ಬಲಬದಿಯಲ್ಲಿನ ಕೊಠಡಿ ಸಂಖ್ಯೆ 1.

ಮಾದರಿ ಮತಗಟ್ಟೆಗಳು: ಮತದಾರರನ್ನು ಆಕರ್ಷಿಸುವ ಸಲುವಾಗಿ ಜಿಲ್ಲೆಯಲ್ಲಿ ಈ ಬಾರಿ 5 ಮಾದರಿ ಮತಗಟ್ಟೆಗಳನ್ನು ಸಹ ನಿರ್ಮಿಸಲಾಗಿದೆ.

ರಾಮನಗರದಲ್ಲಿ ಜಿಲ್ಲಾ ಪಂಚಾಯಿತಿ ಭನವ ಹಾಗೂ ನಗರಸಭೆ, ಮಾಗಡಿ ತಾಲ್ಲೂಕಿನಲ್ಲಿ ಕುದೂರು, ಕನಕಪುರ ತಾಲ್ಲೂಕಿನಲ್ಲಿ ಕನಕಪುರ ಟೌನ್ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಭೈರಾಪಟ್ಟಣದಲ್ಲಿ ಮಾದರಿ ಮತಗಟ್ಟೆಗಳು ನಿರ್ಮಿಸಲಾಗಿದೆ.

ಮತಗಟ್ಟೆಯಲ್ಲಿ ವಿಶೇಷತೆ

ಈ ಮತಗಟ್ಟೆಗಳು ಆಧುನಿಕ ಶೈಲಿಯಲ್ಲಿದ್ದು, ಹೆಲ್ಪ್ ಡೆಸ್ಕ್, ಕುಡಿಯುವ ನೀರು, ವೀಲ್ಹ್ ಚೇರ್‍ ಗಳು, ಹಿರಿಯ ನಾಗರಿಕರಿಗೆ ವಿಶ್ರಾಂತಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಸಮೀಪ ದೃಷ್ಟಿ ಕನ್ನಡಿಗಳ ವ್ಯವಸ್ಥೆ: ಮಂದದೃಷ್ಟಿ ನಾಗರಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಈ ಬಾರಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸಮೀಪ ದೃಷ್ಟಿ ಕನ್ನಡಿಗಳ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಮತಗಟ್ಟೆಗಳಿಗೆ ಒಂದರಂತೆ ಜಿಲ್ಲೆಯ 1140 ಮತಗಟ್ಟೆಗಳಿಗೆ ಭೂತಗನ್ನಡಿ ಲಭ್ಯವಿರುವಂತೆ ವವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT