ಗಿರಿಜನರಿಗೆ ಸಿಕ್ಕ ಭೂಮಿ

7

ಗಿರಿಜನರಿಗೆ ಸಿಕ್ಕ ಭೂಮಿ

Published:
Updated:

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 266 ಕುಟುಂಬಗಳಿಗೆ 1,806 ಎಕರೆ ಕೃಷಿಭೂಮಿಯ ಹಕ್ಕುಪತ್ರವನ್ನು ವಿತರಿಸುವ ಮೂಲಕ 25 ವರ್ಷಗಳಿಂದ ಗಿರಿಜನರು ನಡೆಸುತ್ತಿದ್ದ ಹೋರಾಟಕ್ಕೆ ಅಂತ್ಯ ಹಾಡಲಾಯಿತು.

ಪುನರ್ವಸತಿ ಕೇಂದ್ರದ ಆಶ್ರಮ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಡಗೂರು ವಿಶ್ವನಾಥ್‌ ಹಕ್ಕುಪತ್ರ ವಿತರಿಸಿದರು.

1992ರಲ್ಲಿ ಅರಣ್ಯ ಇಲಾಖೆ ಪ್ಯಾಕೇಜ್‌ ಘೋಷಿಸಿ ನಾಗರಹೊಳೆ ಅರಣ್ಯದಿಂದ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಗಿರಿಜನರನ್ನು ಸ್ಥಳಾಂತರಿಸಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಕಾನೂನು ತೊಡಕು ಉಂಟಾಗಿದ್ದರಿಂದ ಈವರೆಗೂ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿ ರಲಿಲ್ಲ ಎಂದು ಉಪವಿಭಾಗಾಧಿಕಾರಿ ಕೆ.ನಿತೀಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !