ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅರಣ್ಯ ಸಂರಕ್ಷಣೆಗೆ ‘ತುಳಸಿ’ ಕೊಡುಗೆ

ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದ ಹಿರಿಯ ಮಹಿಳೆಗೆ ‘ಪದ್ಮಶ್ರೀ’ ಗೌರವ
Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಕಾರವಾರ: ಮರಗಿಡಗಳೆಂದರೆ ಮಕ್ಕಳಂತೆ ಕಾಣುವ ಅಂಕೋಲಾ ತಾಲ್ಲೂಕಿನಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರಿಗೆ ಈ ಸಾಲಿನ ‘ಪದ್ಮಶ್ರೀ’ ಪುರಸ್ಕಾರ ಪ್ರಕಟವಾಗಿದೆ.ಜಿಲ್ಲೆಯಲ್ಲಿಕಾಡಿನ ರಕ್ಷಣೆಗೆ ತಮ್ಮ 72ರ ಹರೆಯದಲ್ಲೂ ಶ್ರಮಿಸುತ್ತಿರುವ ಅವರು ನೆಟ್ಟು ಬೆಳೆಸಿರುವ ಮರಗಳ ಸಂಖ್ಯೆ ಸುಮಾರು 40 ಸಾವಿರ!

ಹೊನ್ನಳ್ಳಿಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಯ ಪುತ್ರಿಯಾಗಿ ಜನಿಸಿದ ತುಳಸಿ ಅವರಿಗೆ, ಬಾಲ್ಯದಿಂದಲೂ ಪರಿಸರದ ಬಗ್ಗೆ ಅತೀವ ಕಾಳಜಿ. ಆರು ದಶಕಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಗಿಡ, ಮರಗಳನ್ನು ಬೆಳೆಸಿ ಅವರು ಸಂರಕ್ಷಿಸುತ್ತಿದ್ದಾರೆ.

ಬಾಲ್ಯದಲ್ಲಿ ಒಂದೆಡೆ ಕಡುಬಡತನ ಹಾಗೂ ತಮ್ಮ ಎರಡನೇ ವಯಸ್ಸಿಗೇ ತಂದೆಯ ಸಾವು ಅವರನ್ನು ವಿಚಲಿತಗೊಳಿಸಿತು. ವಿದ್ಯಾಭ್ಯಾಸಕ್ಕೂ ಅವಕಾಶ ಸಿಗಲಿಲ್ಲ. ಆಗ ಅನಿವಾರ್ಯವಾಗಿ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಗೋವಿಂದೇ ಗೌಡ ಎಂಬುವವರನ್ನು ಅವರು ಮದುವೆಯಾದರು. ಕೆಲವು ವರ್ಷಗಳಲ್ಲಿಗಂಡನೂ ತೀರಿಹೋದರು.ಮನಸ್ಸಿಗಾದ ಈಆಘಾತಗಳನ್ನು ದೂರ ಮಾಡಲು ಅವರು ಕಾಡಿನ ಸಂರಕ್ಷಣೆಯದಾರಿ ಕಂಡುಕೊಂಡರು. ಈಕಾರ್ಯ ಮುದ ನೀಡಿತು, ಅದರಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಅಂಕೋಲಾ ತಾಲ್ಲೂಕಿನ ವಿವಿಧೆಡೆಅರಣ್ಯ ಇಲಾಖೆ ಹಮ್ಮಿಕೊಳ್ಳುತ್ತಿದ್ದಸಸಿ ನೆಡುವ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದರು. ನಿಸ್ವಾರ್ಥ ಕೆಲಸವನ್ನುಗುರುತಿಸಿದಇಲಾಖೆಯು ಅವರ ಸೇವೆಯನ್ನು ಕಾಯಂಗೊಳಿಸಿಗಿಡ ನೆಡುವ ಉದ್ಯೋಗ ನೀಡಿತು. 14 ವರ್ಷಗಳ ವೃತ್ತಿಜೀವನದ ಬಳಿಕ ನಿವೃತ್ತಿಯಾದರು.

ತಾವು ನೆಟ್ಟಿರುವ ಗಿಡ ಯಾವ ಜಾತಿಯದ್ದು, ಅದರಿಂದ ಪ್ರಯೋಜನವೇನು? ಅದಕ್ಕೆ ಬೇಕಾಗುವ ನೀರಿನ ಪ್ರಮಾಣ... ಈ ರೀತಿ ಎಲ್ಲ ಮಾಹಿತಿಗಳನ್ನೂ ಅವರು ನೀಡಬಲ್ಲರು. ಜತೆಗೇ ತಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಂಕೋಲಾ, ಯಲ್ಲಾಪುರ, ಶಿರಸಿ ತಾಲ್ಲೂಕುಗಳ ವಿವಿಧೆಡೆ ಅವರು ನೆಟ್ಟ ಗಿಡಗಳೀಗಬೃಹದಾಕಾರ ತಾಳಿವೆ. ನೆರಳು ಹುಡುಕಿ ಬಂದವರಿಗೆ ಆಶ್ರಯ ನೀಡುತ್ತಿವೆ.

ಪ್ರಶಸ್ತಿ, ಗೌರವಗಳು

ತುಳಸಿ ಗೌಡ ಅವರಿಗೆಪರಿಸರದ ಮೇಲಿರುವಆದರವನ್ನುಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಗುರುತಿಸಿ ಪುರಸ್ಕರಿಸಿವೆ.

‘ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ’, 1999ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’, ‘ಇಂಡವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ’, ‘ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ’ ಮುಂತಾದ ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಅವರು, ದಟ್ಟವಾದ ಕಾಡು ಬೆಳೆಯುವ ಜಾಗದಲ್ಲಿ ಅಕೇಶಿಯಾ ನೆಡುತೋಪು ನಿರ್ಮಾಣ ಸರಿಯಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT