ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಳು ಬಗ್ಗೆ ಕಾಸರಗೋಡು ಸಂಸದ ಧ್ವನಿ ಎತ್ತಿದ್ದಾರೆ; ನಳಿನ್‌, ಶೋಭಾ ಮೌನ ಯಾಕೆ’

Last Updated 14 ಡಿಸೆಂಬರ್ 2018, 10:38 IST
ಅಕ್ಷರ ಗಾತ್ರ

ಬೆಂಗಳೂರು:ತುಳು ಭಾಷೆಯನ್ನು ಸಂವಿಧಾನದ ಪರಿಚ್ಚೇದಕ್ಕೆ ಸೇರಿಸಬೇಕು ಎಂದು ಕಾಸರಗೋಡಿನಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ, ತುಳುವ ಸಂಸದರಾದ ನಳಿನ್‌ಕುಮಾರ್‌ ಕಟೀಲ್‌ ಮತ್ತು ಶೋಭಾ ಕರಂದ್ಲಾಜೆ ಅವರು ಯಾವುದೇ ಚಕಾರ ಎತ್ತುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ.

ನೈಋತ್ಯ ಭಾರತದಲ್ಲಿ ದಕ್ಷಿಣ ಕನ್ನಡ ಮತ್ತಿತರ ಕಡೆ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ತುಳು ಮಾತನಾಡುವ ಸಾಕಷ್ಟು ಜನರಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂದು ಕಾಸರಗೋಡು ಸಿಪಿಎಂನ ಸಂಸದ ಕರುಣಾಕರ್ ಅವರು ಲೋಕಸಭೆಯಲ್ಲಿ ಮತ್ತೆ ಧ್ವನಿ ಎತ್ತಿದ್ದಾರೆ.‌ ಸೇರಿಸುವ ಅಗತ್ಯತೆಯ ಕುರಿತು ವಾದ ಮಂಡಿಸಿದ್ದಾರೆ.

ಕರುಣಾಕರ್‌ ಅವರು ಸಂಸತ್‌ನಲ್ಲಿ ಧ್ವನಿ ಎತ್ತಿರುವುನ್ನು ಉಲ್ಲೇಖಿಸಿ, ಈ ಬಗ್ಗೆ ಸಂಸತ್‌ನಲ್ಲಿ ಯಾವುದೇ ಮಾತನ್ನೂ ಆಡದಿರುವನಳಿನ್‌ಕುಮಾರ್ ಕಟೀಲ್‌ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ಮಂಗಳೂರು, ಉಡುಪಿಯ ತುಳುವ ಸಂಸದರಾದ ನಳಿನ್, ಶೋಭಾ ಈ ಬಗ್ಗೆ ಚಕಾರ ಎತ್ತಿದ್ದು ಯಾರೂ ಕಂಡಿಲ್ಲ. ಬೆಂಕಿ, ದನ, ಧರ್ಮ, ಹೆಣದ ಸುತ್ತ ಸುತ್ತುವ ಈ ಸಂಸದರುಗಳು ಲೋಕಸಭೆಯಲ್ಲಿ ಇಂತಹ ನೈಜ ವಿಷಯಗಳ ಬಗ್ಗೆ ಮಾತಾಡುವುದು ಯಾವಾಗ?’ ಎಂದು ಅಬ್ದುಲ್‌ ಮುನೀರ್‌ ಎಂಬುವರುಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಒಂದು ರೂಪಾಯಿಗೆ ಹದಿನೈದು ಡಾಲರೂ ಸಿಗಲಿಲ್ಲ, ಪಂಪ್‌ ವೆಲ್‌ ಫ್ಲೈ ಓವರೂ ನಿರ್ಮಾಣ ಆಗಲಿಲ್ಲ, ತುಳು ಎಂಟನೇ ಪರಿಚ್ಚೇದಕ್ಕೂ ಸೇರಲಿಲ್ಲ. ನಳಿನ್, ಶೋಭಾ ಲೋಕಸಭೆಯಲ್ಲಿ ಬಾಯಿ ಬಿಚ್ಚಿ ಮಾತೂ ಆಡಲಿಲ್ಲ. ಮತ ನೀಡಿದವ ಬಕ್ರಾ ಆದರು ಅಷ್ಟೆ’ ಎಂದು ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT