ಬುಧವಾರ, ನವೆಂಬರ್ 20, 2019
26 °C

ಸತತ ತಗ್ಗುತ್ತಿರುವ ನೀರಿನ ಹರಿವು

Published:
Updated:

ಹೊಸಪೇಟೆ: ಸತತವಾಗಿ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ತಗ್ಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಇಳಿಮುಖ ಕಂಡಿದೆ.

ಮಂಗಳವಾರ 95,083 ಕ್ಯುಸೆಕ್‌ ಒಳಹರಿವು ಇದ್ದರೆ, 95,100 ಕ್ಯುಸೆಕ್‌ ಹೊರಹರಿವು ದಾಖಲಾಗಿದೆ. ಸೋಮವಾರ 96,546 ಕ್ಯುಸೆಕ್‌ ಒಳಹರಿವು, 96,600 ಕ್ಯುಸೆಕ್‌ ಹೊರಹರಿವು ದಾಖಲಾಗಿತ್ತು.

ಶನಿವಾರ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಹರಿಸಲಾಗಿತ್ತು. ಆದರೆ, ಭಾನುವಾರದಿಂದ ಸತತವಾಗಿ ಒಳಹರಿವು ಕಡಿಮೆಯಾಗುತ್ತಿರುವ ಕಾರಣ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವೂ ತಗ್ಗಿಸಲಾಗುತ್ತಿದೆ. ನದಿ ಅಂಚಿನ ಕೆಲ ಗ್ರಾಮಗಳು ಮುಳುಗಡೆ ಭೀತಿಯಿಂದ ದೂರವಾಗಿವೆ. ಹಂಪಿಯ ಕೆಲ ಸ್ಮಾರಕಗಳು ಈಗಲೂ ನೀರಿನಲ್ಲಿಯೇ ಇವೆ.

ಪ್ರತಿಕ್ರಿಯಿಸಿ (+)