ಭಾನುವಾರ, ಡಿಸೆಂಬರ್ 6, 2020
19 °C

ಕಾರವಾರ: ಬೆಳಕು ಮೀನುಗಾರಿಕೆ ಮಾಡುತ್ತಿದ್ದ ಗೋವಾದ ಎರಡು ದೋಣಿಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇಲ್ಲಿನ ಕಡಲತೀರದಿಂದ 22 ನಾಟಿಕಲ್ ಮೈಲು ದೂರದಲ್ಲಿ, ನಿಷೇಧಿತ 'ಬೆಳಕು ಮೀನುಗಾರಿಕೆ' (ಲೈಟ್ ಫಿಶಿಂಗ್) ಮಾಡುತ್ತಿದ್ದ ಎರಡು ದೋಣಿಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಸೋಮವಾರ ತಡರಾತ್ರಿ ವಶ ಪಡಿಸಿಕೊಂಡಿದ್ದಾರೆ.

ಗೋವಾದ ಬೇತುಲ್ ನ 'ಕಾನ್ಸಿಪ್' ಮತ್ತು 'ಸೀ ರೋಸ್' ಎಂಬ ದೋಣಿಗಳಲ್ಲಿ ಅಂಕೋಲಾ ತಾಲ್ಲೂಕಿನ ಹಾರವಾಡದ ನಾಲ್ವರು ಹಾಗೂ ಕಾರವಾರದ ಕೋಡಿಬಾಗದ ಒಬ್ಬರು ಸೇರಿದಂತೆ ಒಟ್ಟು 39 ಕಾರ್ಮಿಕರಿದ್ದರು. ಉಳಿದ ಎಲ್ಲ ಕಾರ್ಮಿಕರೂ ಹೊರ ರಾಜ್ಯದವರಾಗಿದ್ದಾರೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ. 

ದೋಣಿಗಳಿಂದ ಎರಡು ಜನರೇಟರ್‌ಗಳು, ಎಲ್‌ಇಡಿ ಬಲ್ಬ್‌ಗಳನ್ನು ಜಪ್ತಿ ಮಾಡಲಾಗಿದೆ. ಕೋಸ್ಟ್‌ಗಾರ್ಡ್‌ನವರು ದೋಣಿಗಳನ್ನು ಮತ್ತು ಕಾರ್ಮಿಕರನ್ನು ಕರಾವಳಿ ಕಾವಲು ಪೊಲೀಸರ ವಶಕ್ಕೆ ನೀಡಿದ್ದಾರೆ. ದೋಣಿಗಳ ಮಾಲೀಕರು, ಅವುಗಳಿಂದ ಆಗಿರುವ ಇತರ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಖರವಾದ ಬೆಳಕಿನ ಆಕರ್ಷಣೆಗೆ ಒಳಗಾಗಿ ಸಣ್ಣ ಸಣ್ಣ ಮೀನುಗಳೂ ಬಲೆಗೆ ಬೀಳುವ ಕಾರಣ ಬೆಳಕು  ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಗೋವಾದ ಮೀನುಗಾರರು ಕಾರವಾರ, ಅಂಕೋಲಾ, ಮುರ್ಡೇಶ್ವರ ಭಾಗಕ್ಕೆ ಬಂದು ರಾತ್ರಿ ಮೀನುಗಾರಿಕೆ ಮಾಡುತ್ತಾರೆ ಎಂದು ಸ್ಥಳೀಯ ಮೀನುಗಾರರು ದೂರಿದ್ದರು. ಈ ಸಂಬಂಧ ಮೂರು ದಿನಗಳ ಹಿಂದೆಯೂ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಎರಡು ದೋಣಿಗಳನ್ನು ಜಪ್ತಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು