ಎರಡು ಮನೆಗಳನ್ನು ಆವರಿಸಿದ ಗುಡ್ಡದ ನೀರು

ಬುಧವಾರ, ಜೂನ್ 26, 2019
23 °C
ಕುಮಟಾ ತಾಲ್ಲೂಕಿನ ತಂಡ್ರಕುಳಿ: ಅಪಾಯ ಅರಿತು ಮನೆ ಬಿಟ್ಟು ಓಡಿ ಪಾರಾದ ಮನೆಯವರು

ಎರಡು ಮನೆಗಳನ್ನು ಆವರಿಸಿದ ಗುಡ್ಡದ ನೀರು

Published:
Updated:
Prajavani

ಕುಮಟಾ: ತಾಲ್ಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಮಂಗಳವಾರ ಸುರಿದ ರಭಸದ ಮಳೆಗೆ ಗುಡ್ಡದ ಮೇಲಿನಿಂದ ಇಳಿದ ನೀರು ಎರಡು ಮನೆಗಳನ್ನು ಸುತ್ತುವರಿದಿದೆ. ಅಪಾಯವನ್ನರಿತ ಮನೆಯವರು ಕೂಡಲೇ ಹೊರಗೋಡಿ ಬಚಾವಾದರು.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ಇಲ್ಲಿ ಗುಡ್ಡವನ್ನು ಕತ್ತರಿಸಲಾಗಿತ್ತು. ಗುಡ್ಡದ ಮೇಲೆ ಸಂಗ್ರಹವಾದ ಮಳೆ ನೀರು ಒಂದೇ ಸಲ ರಭಸದಿಂದ ಕೆಳಗೆ ಹರಿಯಿತು. ಇದರ ಪರಿಣಾಮ, ಹೆದ್ದಾರಿಯ ಕೆಳಭಾಗದ ಎರಡು ಮನೆಗಳು ಜಲಾವೃತವಾದವು. 

ಗಿರಿಜಾ ಗಣಪತಿ ಅಂಬಿಗ ಹಾಗೂ ಜ್ಯೋತಿ ನೀಲಪ್ಪ ಅಂಬಿಗ ಅವರ ಎರಡು ಕುಟುಂಬದವರು ಮಕ್ಕಳನ್ನೂ ಕರೆದುಕೊಂಡು ಮಳೆಯಲ್ಲೇ ಮನೆಯಿಂದ ಹೊರಗೋಡಿದರು. ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸ್ಥಳೀಯರಾದ ರಮೇಶ ಅಂಬಿಗ ತಿಳಿಸಿದ್ದಾರೆ.

‘ಹೆದ್ದಾರಿ ನಿರ್ಮಾಣಕ್ಕೆ ಕತ್ತರಿಸಿದ ಗುಡ್ಡದ ಮೇಲ್ಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಗಟಾರದ ವ್ಯವಸ್ಥೆ ಇರಲಿಲ್ಲ. ಗುಡ್ಡದಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ಮಳೆ ನೀರಿಗೆ ಮಣ್ಣು ಮೆತ್ತಗಾಯಿತು. ಇದರಿಂದ ನೀರು ಎತ್ತರದಿಂದ ಕೆಳಗೆ ಧುಮುಕಿ ಹೆದ್ದಾರಿ ಹಾದು ಕೆಳ ಭಾಗದಲ್ಲಿರುವ ಜನವಸತಿ ಪ್ರದೇಶದತ್ತ ನುಗ್ಗಿತು. ನೀರಿನೊಂದಿಗೆ ಕಲ್ಲು, ಮಣ್ಣು ಕೊಚ್ಚಿಕೊಂಡು ಬಂದವು. ಹೆದ್ದಾರಿಯಲ್ಲಿ ನೀರು ಹರಿಯುವ ರಭಸಕ್ಕೆ ಕೆಲವು ನಿಮಿಷ ವಾಹನ ಸಂಚಾರವೂ ಸ್ಥಗಿತವಾಯಿತು’ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಆರ್.ಕೆ.ಅಂಬಿಗ ಮಾತನಾಡಿ, ‘ಈ ಹಿಂದೆ ಗುಡ್ಡದ ಮೇಲಿನ ನೀರು ಕೆಳಗೆ ಹರಿದು ಬಂದು ಅಘನಾಶಿನಿ ನದಿಗೆ ಹರಿದು ಹೋಗಲು ತಂಡ್ರಕುಳಿಯ ಶಾಲೆ ಬಳಿ ಒಂದು ಮೋರಿ ಇತ್ತು. ಹೆದ್ದಾರಿ ಕಾಮಗಾರಿ ಆರಂಭಿಸಿದ ಐ.ಆರ್.ಬಿ ಕಂಪನಿಯವರು ಅದನ್ನು ಮುಚ್ಚಿದ್ದಾರೆ. ನೀರು ಸಹಜವಾಗಿ ಹರಿದು ಹೋಗುವ ಹೆಚ್ಚಿನ ಕಡೆಗಳಲ್ಲಿ ಈ ರೀತಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ನಿರ್ಮಾಣ ಮಾಡುವ ಐ.ಆರ್.ಬಿ ಕಂಪನಿಯ ಪ್ರತಿನಿಧಿಗಳು, ತಹಶೀಲ್ದಾರ್ ಮೇಘರಾಜ ನಾಯ್ಕ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ಇತ್ತೀಚೆಗಷ್ಟೇ ಪ್ರಕೃತಿ ವಿಕೋಪದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದ ಶಾಸಕ ದಿನಕರ ಶೆಟ್ಟಿ, ತಂಡ್ರಕುಳಿಯಲ್ಲಿ ಗುಡ್ಡ ಕುಸಿತವಾಗುವ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತುರ್ತು ಕ್ರಮದ ಬಗ್ಗೆ ಪತ್ರ ಬರೆದಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !