ವಿಶ್ವ ಹಿಂದಿ ಸಮ್ಮೇಳನಕ್ಕೆ ರಾಜ್ಯದ ಇಬ್ಬರು ವಿದ್ವಾಂಸರಿಗೆ ಆಹ್ವಾನ

7

ವಿಶ್ವ ಹಿಂದಿ ಸಮ್ಮೇಳನಕ್ಕೆ ರಾಜ್ಯದ ಇಬ್ಬರು ವಿದ್ವಾಂಸರಿಗೆ ಆಹ್ವಾನ

Published:
Updated:
Deccan Herald

ಧಾರವಾಡ: ಮಾರಿಷಸ್‌ನಲ್ಲಿ ಇದೇ 18ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾರತದಿಂದ ತೆರಳಲಿರುವ ಪ್ರತಿನಿಧಿ ಮಂಡಳದಲ್ಲಿ ಪಾಲ್ಗೊಳ್ಳಲು ರಾಜ್ಯದ ಇಬ್ಬರು ವಿದ್ವಾಂಸರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.

ಭಾರತ ವಿದೇಶಾಂಗ ಸಚಿವಾಲಯವು ಮಾರಿಷಸ್‌ ಸರ್ಕಾರದ ಸಹಯೋಗದಲ್ಲಿ ಜರುಗಲಿರುವ 11ನೇ ಆವೃತ್ತಿಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಧಾರವಾಡದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗು ಉಡುಪಿಯ ವಿಮರ್ಶಕಿ ಡಾ. ಮಾಧವಿ ಭಂಡಾರಿ ಅವರನ್ನು ಸರ್ಕಾರ ಆಹ್ವಾನಿಸಿದೆ. 

ಮಾರಿಷಸ್‌ನ ಪೋರ್ಟ್ ಲೂಯಿಸ್‌ನಲ್ಲಿರುವ ಸ್ವಾಮಿ ವಿವೇಕಾನಂದ ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ‘ಜಾಗತಿಕ ಹಿಂದಿ ಮತ್ತು ಭಾರತೀಯ ಸಂಸ್ಕೃತಿ’ ವಿಷಯ ಕುರಿತು ಇಲ್ಲಿ ಚರ್ಚೆ ನಡೆಯಲಿದೆ. ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಲಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !