ಭಾನುವಾರ, ಸೆಪ್ಟೆಂಬರ್ 15, 2019
27 °C

ಹರಿಗೋಲು ಮುಗುಚಿ ಇಬ್ಬರ ಸಾವು

Published:
Updated:

ಹೊಸಪೇಟೆ: ಹರಿಗೋಲು ಮುಗುಚಿ ಬಿದ್ದು ಇಬ್ಬರು ಯುವಕರು ಮಂಗಳವಾರ ತಾಲ್ಲೂಕಿನ ಡಣಾಪುರ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೃತಪಟ್ಟಿದ್ದಾರೆ.

ಡಿ.ಕೆ. ಬಸವರಾಜ (25), ಹ್ಯಾರಿಸ್‌ (17) ಮೃತರು. ‘ಹಿನ್ನೀರಿನಲ್ಲಿ ವಿಹರಿಸಲು ಯುವಕರು ಹರಿಗೋಲಿನಲ್ಲಿ ಹೋಗಿದ್ದರು. ಈ ವೇಳೆ ತೆಪ್ಪ ಮುಗುಚಿ ಬಿದ್ದು ನೀರು ಪಾಲಾದರು. ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು ಎರಡು ಗಂಟೆ ಶೋಧ ನಡೆಸಿದ ಬಳಿಕ ಮೃತದೇಹಗಳು ಪತ್ತೆಯಾದವು’ ಎಂದು ಡಿ.ವೈ.ಎಸ್ಪಿ. ಎಂ.ಸಿ. ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)