ಸಂಚುಕೋರರನ್ನೇ ಹಿಡಿಯಿರಿ: ಖಾದರ್

7

ಸಂಚುಕೋರರನ್ನೇ ಹಿಡಿಯಿರಿ: ಖಾದರ್

Published:
Updated:

ಬೆಂಗಳೂರು: ಪ್ರಧಾನಿ ಹತ್ಯೆಗೆ ಯಾರೇ ಸಂಚು ನಡೆಸಿದ್ದರೂ ಅದು ಖಂಡನೀಯ. ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ‘ಹತ್ಯೆಗೆ ಸಂಚು’ ಎಂದು ಹೇಳಿ ಸುದ್ದಿ ಹಬ್ಬಿಸುವುದು, ಸಂಚಿನ ಮೂಲ ವ್ಯಕ್ತಿಯನ್ನು ಬಹಿರಂಗಪಡಿ ಸದೇ ಇರುವುದು ಅಥವಾ ಆತ ಯಾರು ಎಂದು ತಿಳಿಯದೇ ಇರುವುದು ಕೂಡಾ ಸರಿಯಲ್ಲ ಎಂದು ವಸತಿ ಸಚಿವ ಯು.ಟಿ.ಖಾದರ್‌ ಹೇಳಿದರು. 

ಇತ್ತೀಚೆಗೆ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಕವಿ ವರವರ ರಾವ್‌ ರಾವ್‌ ಸಹಿತ ಹಲವರ ಬಂಧನಕ್ಕೆ ಸಂಬಂಧಿಸಿದಂತೆ ಹೀಗೆ ಪ್ರತಿಕ್ರಿಯಿಸಿದರು.

ಗುಪ್ತಚರ ಸಂಸ್ಥೆಗಳು ಆಗಾಗ ಪ್ರಧಾನಿ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಹೇಳಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಈ ರೀತಿ ಮಾಹಿತಿ ನೀಡಿದರೆ ಏನು ಪ್ರಯೋಜನ? ಈ ಮಾಹಿತಿ ಕೊಟ್ಟು ಆಗಾಗ ಸುದ್ದಿ ಮಾಡುವ ಬದಲು ಸಂಚುಕೋರನನ್ನೇ ತೋರಿಸಬಹುದಲ್ಲವೇ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !