ವಿಜ್ಞಾನ ಸ್ಪರ್ಧೆಗಳಲ್ಲಿ ಮಕ್ಕಳ ಕಲರವ

7

ವಿಜ್ಞಾನ ಸ್ಪರ್ಧೆಗಳಲ್ಲಿ ಮಕ್ಕಳ ಕಲರವ

Published:
Updated:
Deccan Herald

ಉದಯಭಾನು ಕಲಾ ಸಂಘ ಹಾಗೂ ಸೊಸೈಟಿ ಫಾರ್ ಸ್ಪೇಸ್ ಎಜುಕೇಷನ್, ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ ಜಂಟಿಯಾಗಿ ಶ್ರೀನಿವಾಸ ರಾಮಾನುಜನ್ ಮಕ್ಕಳ ವಿಜ್ಞಾನ ದಿನ ಆಚರಿಸಿದವು.

ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ 131ನೇ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ 1ರಿಂದ 10ನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ‘ವಿಜ್ಞಾನ ವೇಷಭೂಷಣ ಸ್ಪರ್ಧೆ’ಯಲ್ಲಿ ಮಕ್ಕಳು ವಿಜ್ಞಾನಿಗಳಾಗಿ ಕಂಗೊಳಿಸಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ಚಿತ್ರಕಲಾ ಸ್ಪರ್ಧೆಯು ಮಕ್ಕಳ ಸೃಜನಶೀಲತೆ ಹಾಗೂ ಅವರ ವಿಜ್ಞಾನದ ಅರಿವಿಗೆ ಒಂದು ನಿದರ್ಶನವಾಗಿತ್ತು.

ವಿಜ್ಞಾನಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಹಲವು ವಿಷಯಗಳನ್ನು ಮಕ್ಕಳು ಅಂದವಾಗಿ ಚಿತ್ರ ಬಿಡಿಸಿ ತಿರ್ಪುಗಾರರ ಮತ್ತು ನೋಡುಗರ ಮನ ಸೆಳೆದರು.

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಕೂಡಾ ರೋಚಕವಾಗಿತ್ತು. ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ಒಂಬತ್ತು ತಂಡಗಳು ಮೂರು ಹಂತಗಳಲ್ಲಿ ಸ್ಪರ್ಧಿಸಿದ್ದರು. ಕ್ಷಿಪ್ರವಾಗಿ ಉತ್ತರಿಸಿದ ಎನ್.ಎಚ್.ವಿ.ಪಿ.ಎಸ್ ಶಾಲೆಯ ವಿಧ್ಯಾರ್ಥಿಗಳು ಮೊದಲನೆಯ ಸ್ಥಾನ ಹಾಗು ಮಿತ್ರಾ ಅಕಾಡೆಮಿಯಾ ವಿದ್ಯಾರ್ಥಿಗಳು ಎರಡನೆಯ ಸ್ಥಾನ ಪಡೆದು ಸಂಭ್ರಮಿಸಿದರು.

ನಗರದ ಬೇರೆ ಬೇರೆ ಶಾಲೆಯ ಸುಮಾರು 100 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ವಿಜ್ಞಾನದ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !