ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಆರ್‌ಟಿಒ ಬಳಿ 6 ಮನೆ,12 ನಿವೇಶನ!

Last Updated 22 ಮಾರ್ಚ್ 2019, 20:34 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿ ಎಆರ್‌ಟಿಒ ಆರ್‌.ಎಂ. ವರ್ಣೇಕರ್‌ ಅವರ ಮನೆಗಳು ಹಾಗೂ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆರು ಮನೆಗಳು, 12 ನಿವೇಶನಗಳು, ಎರಡು ಫ್ಲ್ಯಾಟ್‌ಗಳು, 2.30 ಎಕರೆ ಜಮೀನು ಸೇರಿದಂತೆ ಭಾರಿ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.

ಆರೋಪಿ ಅಧಿಕಾರಿ ಉಡುಪಿ ಕಚೇರಿ, ಮಂಗಳೂರಿನ ವಾಸದ ಮನೆ ಹಾಗೂ ಕಾರವಾರದ ವಾಸದ ಮನೆಗಳ ಮೇಲೆ ದಾಳಿ ಮಾಡಿ ಶೋಧ ನಡೆಸಲಾಗುತ್ತಿದೆ. ಎಸಿಬಿ ಅಧಿಕಾರಿಗಳಿಗೆ ಇದುವರೆಗೆ 30 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, 2 ಕಾರು, ಮೂರು ದ್ವಿಚಕ್ರ ವಾಹನ, 50 ಲಕ್ಷ ಠೇವಣಿ ಮತ್ತು ₹ 22.80 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು ಸಿಕ್ಕಿವೆ.ಮಂಗಳೂರಿನಲ್ಲಿ 1 ಮನೆ, 9 ನಿವೇಶನ, 2 ಎಕರೆ ಜಮೀನು; ಪುತ್ತೂರಿನಲ್ಲಿ 1 ಮನೆ, 2ನಿವೇಶನ; ಬೆಂಗಳೂರಿನಲ್ಲಿ 3 ನಿವೇಶನ; ಮೈಸೂರಿನಲ್ಲಿ 1 ಮನೆ, 1 ನಿವೇಶನ, 26 ಗುಂಟೆ ಜಮೀನು ಹಾಗೂ ಬೆಳಗಾವಿಯಲ್ಲಿ 2 ಫ್ಲ್ಯಾಟ್‌ ಮತ್ತು 8 ಗುಂಟೆ ಜಮೀನನ್ನು ವರ್ಣೇಕರ್‌ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT