ಉಡು ಪಿ ವಿ.ಬಿ ತಂಡ ಸೆಮಿಫೈನಲ್‌ಗೆ

7
ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರಮಹಾವಿದ್ಯಾಲಯ ಬ್ಯಾಡ್ಮಿಂಟನ್ ಟೂರ್ನಿ

ಉಡು ಪಿ ವಿ.ಬಿ ತಂಡ ಸೆಮಿಫೈನಲ್‌ಗೆ

Published:
Updated:
Deccan Herald

ಜಮಖಂಡಿ: ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಬಿಎಲ್‌ಡಿಇ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರಮಹಾವಿದ್ಯಾಲಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ವಿ.ಬಿ ಉಡುಪಿ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಕಳೆದ ವರ್ಷದ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್ ಪಡೆದಿದ್ದ ಮಂಗಳೂರಿನ ಎಸ್‌ಡಿಎಂ ಕಾಲೇಜು ತಂಡವನ್ನು ಎರಡನೇ ಸುತ್ತಿನ ಪಂದ್ಯದಲ್ಲಿ (2-0) ಸೆಟ್‌ಗಳಿಂದ ಮಣಿಸಿದ ಉಡುಪಿಯ ವಿ.ಬಿ ಕಾಲೇಜು ತಂಡ ಸೆಮಿಫೈನಲ್ ಪ್ರವೇಶಿಸಿದ ಪ್ರಥಮ ತಂಡ ಎನಿಸಿತು.

ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಜೆಎಸ್‌ಎಸ್, ಬೆಂಗಳೂರಿನ ರಾಮಯ್ಯ, ಹುಬ್ಬಳ್ಳಿಯ ಕೆಎಸ್‌ಎಲ್‌ಯು ತಂಡಗಳು ಸೆಮಿಫೈನಲ್ ಪ್ರವೇಶಿಸಿದ ಇತರ ತಂಡಗಳಾಗಿವೆ.

ಪುರುಷರ ವಿಭಾಗದಲ್ಲಿ ಭಾಗವಹಿಸಿರುವ 26 ಕಾಲೇಜು ತಂಡಗಳನ್ನು ತಲಾ 13 ರಂತೆ ಎ ಮತ್ತು ಬಿ ಗುಂಪಿನಲ್ಲಿ ವಿಂಗಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಸೆಣೆಸುತ್ತಿವೆ. ನಾಕೌಟ್ ಪದ್ಧತಿಯಂತೆ ಟೂರ್ನಿ ಜರುತ್ತಿದೆ.

ಮೊದಲ ದಿನದ ಫಲಿತಾಂಶಗಳು

ಪುರುಷರ ವಿಭಾಗ:
ಎಸ್‌ಡಿಎಂ ಮಂಗಳೂರು ತಂಡ (4-1) ಸೆಟ್‌ಗಳಿಂದ ವಿದ್ಯಾದಯಾ ತುಮಕೂರು ತಂಡದ ವಿರುದ್ದ ಗೆಲುವು
ಬಿಎಂಎಸ್ ಬೆಂಗಳೂರು ತಂಡ (3-0) ಸೆಟ್‌ಗಳಿಂದ ಎಸ್‌ಸಿಎಬಿ ಮೈಸೂರು ತಂಡದ ವಿರುದ್ದ ಗೆಲುವು.
ರಾಮಯ್ಯ ಬೆಂಗಳೂರು ತಂಡ (3-0) ಸೆಟ್‌ಗಳಿಂದ ಸರ್ಕಾರಿ ಕಾಲೇಜು ರಾಮನಗರ ತಂಡದ ವಿರುದ್ಧ ಗೆಲುವು
ಸಿದ್ಧಾರ್ಥ ಗುಲ್ಬರ್ಗಾ ತಂಡ (2-0) ಸೆಟ್‌ಗಳಿಂದ ಹುರಕಡ್ಲಿ ಅಜ್ಜ ಧಾರವಾಡ ತಂಡದ ವಿರುದ್ದ ಗೆಲುವು
ಶೇಷಾದ್ರಿಪುರಂ ಬೆಂಗಳೂರು ತಂಡ (3-2) ಸೆಟ್‌ಗಳಿಂದ ಆರ್.ವಿ. ಬಿಡಪ ಬೀದರ ತಂಡದ ವಿರುದ್ದ ಗೆಲುವು
ಸರ್ಕಾರಿ ಕಾಲೇಜು ಹಾಸನ ತಂಡ (3-1) ಸೆಟ್‌ಗಳಿಂದ ಎಸ್.ಎ ಮಾನ್ವಿ ಗದಗ ತಂಡದ ವಿರುದ್ದ ಗೆಲುವು
ಜೆಎಸ್‌ಎಸ್ ಮೈಸೂರು ತಂಡ (5-2) ಸೆಟ್‌ಗಳಿಂದ ಕೃಷ್ಣಾ ತುಮಕೂರು ತಂಡದ ವಿರುದ್ದ ಗೆಲವು
ಸರ್ಕಾರಿ ಕಾಲೇಜು ಹೊಳೇನರಸಿಪುರ ತಂಡ (5-2) ಸೆಟ್‌ಗಳಿಂದ ಕೆಎಲ್‌ಇ ಚಿಕ್ಕೋಡಿ ತಂಡದ ವಿರುದ್ದ ಗೆಲವು
ಆರ್‌ಎಲ್ ದಾವಣಗೆರೆ ತಂಡ (3-2) ಸೆಟ್‌ಗಳಿಂದ ಕೆಎಸ್‌ಎಲ್‌ಯು ಹುಬ್ಬಳ್ಳಿ ತಂಡದ ವಿರುದ್ದ ಗೆಲುವು
ವಿದ್ಯಾವರ್ಧಕ ಮೈಸೂರು ತಂಡ (5-2) ಸೆಟ್‌ಗಳಿಂದ ಕೆಪಿಎಸ್ ಧಾರವಾಡ ತಂಡದ ವಿರುದ್ದ ಗೆಲುವು

ಮಹಿಳೆಯರ ವಿಭಾಗ:

ಜೆಎಸ್‌ಎಸ್ ಮೈಸೂರು ತಂಡ (2-0) ಸೆಟ್‌ಗಳಿಂದ ಎಸ್‌ಸಿಎಬಿ ರಾಯಚೂರು ತಂಡದ ವಿರುದ್ದ ಗೆಲುವು
ಎಸ್‌ಡಿಎಂ ಮಂಗಳೂರು ತಂಡ (3-1) ಸೆಟ್‌ಗಳಿಂದ ಕೆಎಲ್‌ಇ ಬೆಂಗಳೂರು ತಂಡದ ವಿರುದ್ದ ಗೆಲುವು
ರಾಮಯ್ಯ ಬೆಂಗಳೂರು ತಂಡ (2-0) ಸೆಟ್‌ಗಳಿಂದ ಕ್ರೈಸ್ತ್‌ ಬೆಂಗಳೂರು ತಂಡದ ವಿರುದ್ದ ಗೆಲುವು
ಕೆಎಸ್‌ಎಲ್‌ಯು ಹುಬ್ಬಳ್ಳಿ ತಂಡ (2-0) ಸೆಟ್‌ಗಳಿಂದ ಕೆಎಲ್‌ಇ ಚಿಕ್ಕೋಡಿ ತಂಡದ ವಿರುದ್ದ ಗೆಲುವು
ಆರ್‌ಎಲ್ ದಾವಣಗೆರೆ ತಂಡ (2-0) ಸೆಟ್‌ಗಳಿಂದ ಬಿಎಲ್‌ಡಿಇ ಜಮಖಂಡಿ ತಂಡದ ವಿರುದ್ದ ಗೆಲುವು
ವಿ.ಬಿ ಉಡುಪಿ ತಂಡ (3-1) ಸೆಟ್‌ಗಳಿಂದ ವಿದ್ಯಾವರ್ಧಕ ಮೈಸೂರು ತಂಡದ ವಿರುದ್ದ ಗೆಲುವು
ಆರ್‌ಎಲ್ ಬೆಳಗಾವಿ ತಂಡ (3-1) ಸೆಟ್‌ಗಳಿಂದ ಸರ್ಕಾರಿ ಕಾಲೇಜು ಹಾಸನ ತಂಡದ ವಿರುದ್ದ ಗೆಲುವು
ಶೇಷಾದ್ರಪುರಂ ಬೆಂಗಳೂರು ತಂಡ (3-1) ಸೆಟ್‌ಗಳಿಂದ ಸಿದ್ಧಾರ್ಥ ಗುಲ್ಬರ್ಗಾ ತಂಡದ ವಿರುದ್ದ ಗೆಲುವು
ಜೆಎಸ್‌ಎಸ್ ಮೈಸೂರು ತಂಡ (2-0) ಸೆಟ್‌ಗಳಿಂದ ಆರ್‌ಎಲ್ ದಾವಣಗೆರೆ ತಂಡದ ವಿರುದ್ದ ಗೆಲುವು
ವಿ.ಬಿ. ಉಡುಪಿ ತಂಡ (2-0) ಸೆಟ್‌ಗಳಿಂದ ಎಸ್‌ಡಿಎಂ ಮಂಗಳೂರು ತಂಡದ ವಿರುದ್ದ ಗೆಲುವು
ರಾಮಯ್ಯ ಬೆಂಗಳೂರು ತಂಡ (2-0) ಸೆಟ್‌ಗಳಿಂದ ಆರ್‌ಎಲ್ ಬೆಳಗಾವಿ ತಂಡದ ವಿರುದ್ದ ಗೆಲವು

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !