ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನದಲ್ಲಿ ಐದು ಕಡೆ ಸರ ಕಳವು

Last Updated 21 ಮಾರ್ಚ್ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ಸರಗಳ್ಳರ ಹಾವಳಿ ಪುನಃ ಶುರುವಾಗಿದ್ದು, ನಗರದ ಎರಡು ಕಡೆ ಹಾಗೂ ಹೊರವಲಯದ ಮೂರು ಕಡೆಗಳಲ್ಲಿ ಬುಧವಾರ ಕೃತ್ಯ ಎಸಗಿದ್ದಾರೆ.

ಸೋಲದೇವನಹಳ್ಳಿ ಬಳಿಯ ಕೆರೆಗುಡ್ಡದಹಳ್ಳಿಯ ಲೇಕ್ ವ್ಯೂ ಗಾರ್ಡನ್‌ನಲ್ಲಿ ದುಷ್ಕರ್ಮಿಗಳು, ಚಿಕ್ಕತಾಯಮ್ಮ (61) ಅವರ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ವಾಯುವಿಹಾರಕ್ಕೆ ಹೋಗಿದ್ದ ವೇಳೆ ಕೃತ್ಯ ನಡೆದಿದ್ದು, 44 ಗ್ರಾಂ ಸರ ಕಿತ್ತೊಯ್ದ ಬಗ್ಗೆ ಚಿಕ್ಕತಾಯಮ್ಮ ದೂರು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ವಿದ್ಯಾರಣ್ಯಪುರ ಬಳಿಯ ವಡೇರಹಳ್ಳಿಯಲ್ಲಿ ತಂಗಮ್ಮ (60) ಅವರ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ. ವಾಯುವಿಹಾರ ಮುಗಿಸಿ ಮನೆಗೆ ವಾಪಸ್ ಹೊರಟಿದ್ದಾಗ ಈ ಘಟನೆ ನಡೆದಿದೆ.

ಮಾದನಾಯಕನಹಳ್ಳಿಯ ತೋಟಗುಡ್ಡದಹಳ್ಳಿಯಲ್ಲಿ ಮಕ್ಕಳನ್ನು ಶಾಲಾ ಬಸ್ಸಿಗೆ ಹತ್ತಿಸಲು ಕಾಯುತ್ತಿದ್ದ ಪದ್ಮಾ (35) ಎಂಬುವರ 45 ಗ್ರಾಂ ಚಿನ್ನದ ಮಾಂಗಲ್ಯವನ್ನು ಕಳವು ಮಾಡಲಾಗಿದೆ. ದೊಡ್ಡಬಳ್ಳಾಪುರದ ಎರಡು ಕಡೆಗಳಲ್ಲಿ ಇಂಥದ್ದೇ ಘಟನೆಗಳು ನಡೆದಿವೆ. ಈ ಸಂಬಂಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

‘ಕಪ್ಪು ಬಣ್ಣದ ಪಲ್ಸರ್‌ನಲ್ಲಿ ಬಂದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಇದರಲ್ಲಿ ಒಂದೇ ಗ್ಯಾಂಗ್‌ನ ಕೈವಾಡವಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT