ಶುಕ್ರವಾರ, ನವೆಂಬರ್ 15, 2019
24 °C

ನೇಮಕ: ಗಡುವಿನೊಳಗೆ ಸಾಧ್ಯವೇ?

Published:
Updated:

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಮತ್ತು ಪ್ರಾಂಶುಪಾಲರ ಹುದ್ದೆಗಳನ್ನು ನ. 10ರೊಳಗೆ ಭರ್ತಿ ಮಾಡಲು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗಡುವು ನೀಡಿದ್ದು, ಇದು ಜಾರಿ ಆಗುವುದೇ ಎಂಬ ಪ್ರಶ್ನೆ ಮೂಡಿದೆ.

1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಾವಳಿ ರೂಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇನ್ನು ಹತ್ತು ದಿನಗಳ ಒಳಗೆ ಈ ಪ್ರಕ್ರಿಯೆ ಕೊನೆಗೊಂಡು ನೇಮಕಾತಿ ನಡೆಯುವುದು ಅಸಾಧ್ಯ ಎಂಬ ಮಾತು ಕೇಳಿಬಂದಿದೆ.

ಯುಜಿಸಿ ಈ ಮೊದಲು ಆಗಸ್ಟ್‌ 10ರೊಳಗೆ ನೇಮಕಾತಿ ಪೂರ್ಣಗೊಳಿಸಲು ಸೂಚಿಸಿತ್ತು. ಅದನ್ನು ಪೂರೈಸುವುದು ಆಗಿರಲಿಲ್ಲ. ಕೊನೆಗೆ ನವೆಂಬರ್‌ 10ರ ಗಡುವು ನೀಡ
ಲಾಗಿದೆ. ಮತ್ತೆ ಗಡುವು ವಿಸ್ತರಿಸಲು ಕೋರಿಕೆ ಸಲ್ಲಿಸಿ, ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)