‘ಉಳವಿ ಚೆನ್ನಬಸವೇಶ್ವರ ಜಾತ್ರೆ: ಮಠಾಧೀಶರಿಗೆ ಆಹ್ವಾನವಿಲ್ಲ’

7

‘ಉಳವಿ ಚೆನ್ನಬಸವೇಶ್ವರ ಜಾತ್ರೆ: ಮಠಾಧೀಶರಿಗೆ ಆಹ್ವಾನವಿಲ್ಲ’

Published:
Updated:

ಕಾರವಾರ:‘ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಮಂಗಳವಾರದಿಂದ (ಫೆ.12) ನಡೆಯುವ ಚನ್ನಬಸವೇಶ್ವರ ಜಾತ್ರೆಗೆ ಯಾವ ಮಠಾಧೀಶರಿಗೂ ಆಹ್ವಾನ ನೀಡಿಲ್ಲ. ಅವರಾಗಿ ಬಂದರೆ ಗೌರವದಿಂದ ಸ್ವಾಗತಿಸಲಾಗುವುದು’ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ ಉಪಾಧ್ಯಕ್ಷ ಸಂಜಯ ಬಸವರಾಜ ಕಿತ್ತೂರ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಮಂತ್ರಣ ಇಲ್ಲದಿದ್ದರೂ ರಥೋತ್ಸವಕ್ಕೆ ಬಂದಿ ದ್ದರು. ಆಗ ಅವರು ರಥವೇರಲು ಪಟ್ಟು ಹಿಡಿದ ಕಾರಣ ಉತ್ಸವಕ್ಕೆ ಅಡಚಣೆಯಾಗಿತ್ತು. ಈ ಬಾರಿ ಅವರಿಗೆ ಅವಕಾಶ ನೀಡುವುದು ಭಕ್ತರಿಗೆ ಬಿಟ್ಟ ವಿಚಾರ. ಒಂದು ವೇಳೆ ಈ ಸಲವೂ ಮಠಾಧೀಶರು ಬಂದು ಭಕ್ತರ ನಡುವೆ ವಾಗ್ವಾದ, ಹೊಡೆದಾಟ ನಡೆದರೆ ಅದಕ್ಕೆ ಅವರೇ (ಮಠಾಧೀಶರು) ಹೊಣೆಗಾರರು’ ಎಂದು ಹೇಳಿದರು. 

‘ಮುರುಘಾ ಮಠದವರು ಉಳವಿ ದೇವಸ್ಥಾನವನ್ನು ತಮ್ಮ ಶಾಖಾ ಮಠ ಎಂದು ಹೇಳಿಕೊಳ್ಳುತ್ತಾರೆ. ದೇವಸ್ಥಾನ ಯಾರಿಗೆ ಸೇರಿದ್ದೆಂಬ ವಿಚಾರ ನ್ಯಾಯಾಲಯದಲ್ಲಿದೆ. ಗೊಂದಲ ಉಂಟಾಗ ಬಾರದು ಎಂದು ನಾವಾಗಿಯಾವುದೇ ಕಾವಿಧಾರಿಗಳಿಗೂ ಆಮಂತ್ರಣ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !