ರಾಜೀನಾಮೆ ಅಂಗೀಕಾರ ವಿಳಂಬ: ಜಾಧವಗೆ ‘ವರ’!

ಶುಕ್ರವಾರ, ಮಾರ್ಚ್ 22, 2019
26 °C
ಜಾಧವಗೆ ಜೀವದಾನ

ರಾಜೀನಾಮೆ ಅಂಗೀಕಾರ ವಿಳಂಬ: ಜಾಧವಗೆ ‘ವರ’!

Published:
Updated:
Prajavani

ಕಲಬುರ್ಗಿ: ಚಿಂಚೋಳಿಯ ಡಾ.ಉಮೇಶ ಜಾಧವ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗದಿರುವುದು ಅವರಿಗೆ ‘ವರ’ವಾಗಿ ಪರಿಣಮಿಸಿದೆ!

ಜಾಧವ ಅವರು ಮಾ.4ರಂದು ರಾಜೀನಾಮೆ ಸಲ್ಲಿಸಿದ್ದರು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶಕುಮಾರ್ ಅವರು ರಾಜೀನಾಮೆ ಅಂಗೀಕರಿಸಿ, ಈ ಕ್ಷೇತ್ರದ ಶಾಸಕ ಸ್ಥಾನ ಖಾಲಿ ಇದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೆ ಲೋಕಸಭೆ ಚುನಾವಣೆಯೊಂದಿಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಘೋಷಣೆಯಾಗುವ ಸಾಧ್ಯತೆ ಇತ್ತು.

‘ಜಾಧವ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಅಲ್ಲಿ ಹೆಚ್ಚುಕಡಿಮೆಯಾದರೆ, ಮತ್ತೆ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ. ಎರಡೂ ಚುನಾವಣೆ ಏಕಕಾಲಕ್ಕೆ ನಡೆದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ರಾಜೀನಾಮೆ ಅಂಗೀಕಾರ ವಿಳಂಬವಾಗಿರುವುದು ಅವರಿಗೆ ಈ ಬಗೆಯ ‘ಸುರಕ್ಷತೆ’ ಕಲ್ಪಿಸಿಕೊಟ್ಟಂತಾಗಿದೆ’ ಎಂಬುದು ಮೂಲಗಳ ಮಾಹಿತಿ.

ಚಿಂಚೋಳಿ ವರದಿ: ‘ನನ್ನ ರಾಜೀನಾಮೆ ಅಂಗೀಕಾರವಾಗಿದ್ದರೆ ಎರಡೂ ಚುನಾವಣೆ ಒಮ್ಮೆಲೆ ನಡೆಯುತ್ತಿದ್ದವು. ಇದಕ್ಕೆ ನಾನೂ ಹೆದರಿರಲಿಲ್ಲ. ಬಿಜೆಪಿಯೂ ಸಿದ್ಧವಾಗಿತ್ತು’ ಎಂದು ಡಾ.ಉಮೇಶ ಜಾಧವ ಅವರು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !