ಮಂಗಳವಾರ, ನವೆಂಬರ್ 19, 2019
27 °C

ಏಕರೂಪ ನಾಗರಿಕ ಸಂಹಿತೆಗೆ ವಿಳಂಬವೇಕೆ: ಸುಪ್ರೀಂ

Published:
Updated:

ನವದೆಹಲಿ: ನ್ಯಾಯಾಲಯದ ನಿರ್ದೇಶನವಿದ್ದರೂ, ಏಕರೂಪದ ನಾಗರಿಕ ಸಂಹಿತೆ ರೂಪಿಸುವ ಯಾವುದೇ ಯತ್ನಗಳು ಏಕೆ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಗೋವಾದ ಉದಾಹರಣೆ ನೀಡಿದ ಕೋರ್ಟ್, ಅಲ್ಲಿ ಧರ್ಮ, ಜಾತಿ ಎನ್ನದೆ, ಎಲ್ಲರಿಗೂ ನಾಗರಿಕ ಸಂಹಿತೆ ಅನ್ವಯವಾಗುತ್ತಿದೆ ಎಂದಿದೆ.

ಭಾರತದ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಏಕರೂಪ ನಾಗರಿಕ ಸಂಹಿತೆ ಅಳವಡಿಸಿಕೊಳ್ಳುವ ಯತ್ನ ಆಗಬೇಕು ಎಂದು ಸಂವಿಧಾನದ 44ನೇ ವಿಧಿ ಆಶಿಸಿತ್ತು. ಆದರೆ ಈ ನಿಟ್ಟಿನಲ್ಲಿ ಯಾವುದೇ ಯತ್ನಗಳು ಆಗಿಲ್ಲ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠ ಹೇಳಿತು.

‘1956ರಲ್ಲಿ ಹಿಂದೂ ಕಾನೂನು ಸಂಹಿತೆ ಜಾರಿಗೊಂಡಿತ್ತು. ಆದರೆ ಎಲ್ಲರಿಗೂ ಅನ್ವಯವಾಗುವ ಕಾನೂನು ಜಾರಿಗೊಳಿಸಲು ಈವರೆಗೂ ಏಕೆ ಸಾಧ್ಯವಾಗಿಲ್ಲ’ ಎಂದು ಪೀಠ ಪ್ರಶ್ನಿಸಿತು.

ಪ್ರತಿಕ್ರಿಯಿಸಿ (+)