ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಬೋಧನೆ, ಕಲಿಕೆಯಲ್ಲಿನ ಲೋಪದೋಷ ಸರಿಪಡಿಸಿ–ಷಟ್ಟರ್‌

Last Updated 19 ಮಾರ್ಚ್ 2019, 20:01 IST
ಅಕ್ಷರ ಗಾತ್ರ

ಕ ರ್ನಾಟಕ ಇತಿಹಾಸ ಕಾಂಗ್ರೆಸ್‌ 28ನೇ ವಾರ್ಷಿಕ ಅಧಿವೇಶನ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಡಾ. ಕೆ.ವಿ.ಜಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ದೇಶದ ಖ್ಯಾತ ಚರಿತ್ರಕಾರ ಪ್ರೊ. ಎಸ್. ಷಟ್ಟರ್‌ ಅಧಿವೇಶನದ ಉದ್ಘಾಟಿಸಿದರು. ‘ಇದುವರೆಗಿನ ಚರಿತ್ರೆಯ ಭೋಧನೆ ಹಾಗೂ ಕಲಿಕೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಯು ಐತಿಹಾಸಿಕ ಪರಂಪರೆಯನ್ನು ಯಥಾವತ್ತಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕೆಳಸ್ತರದ ಚಿಂತನೆಗಳನ್ನು ರೂಢಿಸಿ ನಿರೂಪಿಸುವ ಕಾಳಜಿ ವಹಿಸುವುದು ಮುಖ್ಯ. ಇತಿಹಾಸ ಕ್ಷೇತ್ರಕ್ಕೆ ಇದುವರೆಗೂ ಮಾಡಿರುವ ಅಪಚಾರಗಳನ್ನು ತೊಳೆದು ಹಾಕುವಲ್ಲಿ ಹೊಸ ಪರಿಕರಗಳ ಶೋಧನೆ ತುಂಬ ಅಗತ್ಯ. ತಿಳಿದಿರುವ ಇತಿಹಾಸ ಇನ್ನೂ ತಿಳಿಯಬೇಕಾದ ಇತಿಹಾಸದೊಂದಿಗೆ ಸಮತೋಲನ ಆಗುವಂತೆಯೂ ಎಚ್ಚರ ವಹಿಸಬೇಕಿದೆ‘ ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಭೂಕಂದಾಯ ವ್ಯವಸ್ಥೆಯು ಬೆಳೆದು ಬಂದ ಕ್ರಮ ಮತ್ತು ವಸಾಹತುಷಾಹಿ ಪರಂಪರೆಯನ್ನು ನಿರೂಪಿಸಿ ಇಂದಿನವರೆಗೆ ಭೂ ಹಿಡುವಳಿ, ಕಂದಾಯದ ನೀತಿ ನಿಯಮಗಳ ವಿಕಾಸದ ಬಗ್ಗೆ28ನೇ ಕರ್ನಾಟಕ ಇತಿಹಾಸ ಕಾಂಗ್ರೆಸ್‌ನ ಸರ್ವಾಧ್ಯಕ್ಷ ಪ್ರೊ. ಷಡಕ್ಷರಯ್ಯ ವಿವರಿಸಿದರು. ಕರ್ನಾಟಕ ಚರಿತ್ರೆಯನ್ನು ಬೆಳೆಸುವಲ್ಲಿ ಹಾಗೂ ಸಂಶೋಧನೆಗಳನ್ನು ಕೈಗೊಳ್ಳುವಲ್ಲಿಕರ್ನಾಟಕ ಇತಿಹಾಸ ಕಾಂಗ್ರೆಸ್‌ ಪಾತ್ರವನ್ನುಪ್ರೊ. ಆರ್. ರಾಜಣ್ಣ ವಿವರಿಸಿದರು.

ಮೂರು ದಿನಗಳ ಶೈಕ್ಷಣಿಕ ಸಮಾವೇಶದಲ್ಲಿ ನಾಡಿನ ಖ್ಯಾತ ಇತಿಹಾಸಕಾರರಾದ ಪ್ರೊ.ಎ.ಕೆ ಶಾಸ್ತ್ರಿ, ಪ್ರೊ. ಎಂ.ವಿ. ಶ್ರೀನಿವಾಸ್, ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ, ಪ್ರೊ. ನರಸಿಂಗರಾಜ ನಾಯ್ಡು, ಪ್ರೊ. ರು.ಮ.ಷಡಕ್ಷರಯ್ಯ ಪಾಲ್ಗೊಂಡಿದ್ದರು. ಅಧಿವೇಶನದಲ್ಲಿ ದೂರದ ಕೋಲ್ಕತ್ತಾ, ಹೈದರಾಬಾದ್, ಗುಲ್ಬರ್ಗಾ, ಹಂಪಿ, ಬೆಳಗಾಂ, ಶಿವಮೊಗ್ಗ, ಧಾರವಾಡ, ದಾವಣಗೆರೆ, ಮೈಸೂರು, ತುಮಕೂರು ಮತ್ತು ಕೋಲಾರದ ಇತಿಹಾಸಕ್ತರು ಪಾಲ್ಗೊಂಡಿದ್ದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಇತಿಹಾಸ ಕಾಂಗ್ರೆಸ್‌ ಕಾರ್ಯದರ್ಶಿ ಡಾ. ಎಂ. ಮುನಿರಾಜಪ್ಪ ಸ್ವಾಗತಿಸಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಎನ್ ಷೇಕ್ ಮಸ್ತಾನ್‌ ಅತಿಥಿಗಳನ್ನು ಪರಿಚಯಿಸಿದರು.ಇತಿಹಾಸ ವಿಭಾಗದಅಧ್ಯಕ್ಷ ಡಾ. ಎಸ್. ನಾಗರತ್ನಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT