ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಆತಂಕ ಮೂಡಿಸಿದ ವಿಚಿತ್ರ ಶಬ್ದ

ಒಮ್ಮೆ ಜೋರಾದ ಗೊರಕೆಯಂತೆ, ಮತ್ತೊಮ್ಮೆ ಅಲೆಗಳು ಅಪ್ಪಳಿಸಿದಂತೆ!
Last Updated 14 ಸೆಪ್ಟೆಂಬರ್ 2019, 14:20 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಟಿಬೆಟನ್ ಕ್ಯಾಂಪ್ ಬಳಿಶುಕ್ರವಾರ ಸಂಜೆಕೆಲವು ಗಂಟೆಗಳ ಕಾಲ ಭೂಮಿಯೊಳಗಿಂದವಿಚಿತ್ರವಾಗಿ ಶಬ್ದ ಕೇಳಿಬಂತು. ಇದರಿಂದ ಸ್ಥಳೀಯರು ಆತಂಕಕ್ಕೆಒಳಗಾದರು.

ಕ್ಯಾಂಪ್ ಸಮೀಪದ ಅಕೇಶಿಯಾನೆಡುತೋಪಿನಲ್ಲಿ ಮನುಷ್ಯರು ದೊಡ್ಡದಾಗಿ ಗೊರಕೆ ಹೊಡೆಯುವ ರೀತಿಯಲ್ಲಿ ಶಬ್ದ ಕೇಳಿಬಂದಿದೆ. ಇದನ್ನು ಕೇಳಿದ ಟಿಬೆಟನ್ ವ್ಯಕ್ತಿಯೊಬ್ಬರು ಸ್ಥಳೀಯ ರೈತರಿಗೆ ತಿಳಿಸಿದ್ದಾರೆ. ಕೆಲವು ಗಂಟೆಗಳವರೆಗೆ ಇಂತಹ ಶಬ್ದನೆಡುತೋಪಿನಮೂಲೆಯಿಂದ ಕೇಳಿಸಿದೆ. ಜನರು ಕುತೂಹಲದಿಂದ ತಂಡೋಪತಂಡವಾಗಿ ಭೇಟಿ ನೀಡಿ ಶಬ್ದಕ್ಕೆ ಕಿವಿಗೊಟ್ಟಿದ್ದಾರೆ.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಷ್ಟರಲ್ಲಿ ಶಬ್ದದ ತೀವ್ರತೆಕ್ರಮೇಣ ಕಡಿಮೆಯಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದರು.

‘ನೆಡುತೋಪಿನಲ್ಲಿ ಜಾನುವಾರನ್ನು ಮೇಯಿಸಲು ಹೋದಾಗ ವಿಚಿತ್ರ ಶಬ್ದ ಕೇಳಿತು. ಮೂಲೆಯಲ್ಲಿ ಹೋಗಿ ಕೇಳಿದಾಗ ನೀರಿನ ಅಲೆಗಳು ಒಂದಕ್ಕೊಂದು ಅಪ್ಪಳಿಸುವ ರೀತಿಯಲ್ಲಿ ಕೇಳುತ್ತಿತ್ತು. ಕೆಲವೊಮ್ಮೆ ಪೊಳ್ಳಾದ ಜಾಗದಲ್ಲಿ ನೀರು ರಭಸವಾಗಿ ಹರಿದಂತೆ ಕೇಳಿಸುತ್ತಿತ್ತು. ಈ ಸುದ್ದಿ ತಿಳಿದ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಬಂದು ವೀಕ್ಷಿಸಿದರು’ ಎಂದು ಪ್ರತ್ಯಕ್ಷದರ್ಶಿ ಸಿರಿಂಗ್ ಪಾಲ್ಡೆನ್ ಹೇಳಿದರು.

‘ಸ್ಥಳಕ್ಕೆ ಬಂದವರುಒಂದೊಂದು ರೀತಿ ವಿಶ್ಲೇಷಣೆ ಮಾಡುತ್ತಿದ್ದರು. ಶಬ್ದ ಕೇಳಿಸುತ್ತಿದ್ದ ಜಾಗದಲ್ಲಿ ಕೋಲಿನಿಂದ ಅಗೆದಾಗ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಂತೆ ಕಂಡುಬಂತು’ ಎಂದು ಸ್ಥಳೀಯ ರೈತ ಸಂಜಯ ರಾಠೋಡ ಹೇಳಿದರು.

ಸುದ್ದಿ ಹಬ್ಬಿದ್ದರಿಂದ ಕೆಲವರು ಶಬ್ದ ಕೇಳಿಸಿದ ಜಾಗವನ್ನು ಶನಿವಾರವೂ ವೀಕ್ಷಿಸಿದರು.ಅಲ್ಲಿಯಾವುದೇ ಶಬ್ದ ಕೇಳಿಬರಲಿಲ್ಲ ಎಂದು ಸ್ಥಳೀಯ ನಿವಾಸಿ ಪ್ರಕಾಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT