ಹುಟ್ಟುಹಬ್ಬದಂದು ಉಪ್ಪಿಯ ಹೊಸಪಕ್ಷ ಘೋಷಣೆ,ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ಧತೆ

7
ಉತ್ತಮ ಪ್ರಜಾಕೀಯ ಪಾರ್ಟಿ(ಯುಪಿಪಿ)

ಹುಟ್ಟುಹಬ್ಬದಂದು ಉಪ್ಪಿಯ ಹೊಸಪಕ್ಷ ಘೋಷಣೆ,ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ಧತೆ

Published:
Updated:

ಬೆಂಗಳೂರು: ನಟ ಉಪೇಂದ್ರ ಮತ್ತೆ ರಾಜಕೀಯಕ್ಕೆ ಮರಳಲು ಸಿದ್ಧತೆ ನಡೆಸಿದ್ದು, ಹೊಸ ಪಕ್ಷದ ಘೋಷಣೆಗೆ ಮುಹೂರ್ತವೂ ನಿಗದಿಯಾಗಿದೆ.

ಕತ್ರಿಗುಪ್ಪೆಯಲ್ಲಿರುವ ಅವರ ನಿವಾಸದಲ್ಲಿ ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಅಂದೇ ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಪಿ)ಯು ಅಧಿಕೃತವಾಗಿ ಘೋಷಣೆಯಾಗಲಿದೆ.

‘ಜನತಂತ್ರ ವ್ಯವಸ್ಥೆಗೆ ಮಾರಕವಾಗಿರುವ ಹಣಬಲ, ಜಾತಿಬಲ, ತೋಳ್ಬಲ ಮತ್ತು ಖ್ಯಾತಿಬಲಗಳನ್ನು ಅಳಿಸಿ ಸಂಪೂರ್ಣ ಪಾರದರ್ಶಕ ಆಡಳಿತ ನೀಡುವುದೇ ಪಕ್ಷದ ಉದ್ದೇಶ. ಉತ್ತಮ ಪ್ರಜಾಕೀಯ ವ್ಯವಸ್ಥೆಯನ್ನು ರೂಪಿಸುವುದೇ ನನ್ನ ಮುಂದಿನ ಗುರಿ’ ಎಂದು ಉಪೇಂದ್ರ ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಉಪೇಂದ್ರ ಅವರು ‘ಪ್ರಜಾಕೀಯ’ ಹೆಸರಿನಡಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಎಂಬ ಪಕ್ಷವನ್ನು ಹುಟ್ಟುಹಾಕಿದ್ದರು. ಆದರೆ, ಚುನಾವಣೆ ಘೋಷಣೆಯಾಗುವ ವೇಳೆಗೆ ಪಕ್ಷದ ಅಧ್ಯಕ್ಷರೊಟ್ಟಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು. ಹಾಗಾಗಿ, ಅವರು ಪಕ್ಷದಿಂದ ಹೊರ ನಡೆದಿದ್ದರು.  

ಬಳಿಕ ಅವರು ಕೇಂದ್ರ ಚುನಾವಣಾ ಆಯೋಗದಲ್ಲಿ ಉತ್ತಮ ಪ್ರಜಾಕೀಯ ಪಕ್ಷವನ್ನು ನೋಂದಾಯಿಸಿದ್ದರು. ಸ್ವಂತ ಪಕ್ಷದಿಂದಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉಪ್ಪಿ ತಯಾರಿ ನಡೆಸಿದ್ದಾರೆ. ಇದಕ್ಕೂ ಮೊದಲು ಪಕ್ಷದ ಕಾರ್ಯಸೂಚಿ ಘೋಷಿಸಿ ರಾಜ್ಯದಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ‌ ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !