ಶನಿವಾರ, ಡಿಸೆಂಬರ್ 14, 2019
24 °C

ಟಿಕೆಟ್ ವಂಚಿತರಲ್ಲಿ ಅಸಮಾಧಾನ ಸಹಜ, ಮುಂದೆ ಸರಿಪಡಿಸಲಾಗುವುದು: ನಳಿನ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಟಿಕೆಟ್ ವಂಚಿತರಲ್ಲಿ ಅಸಮಾಧಾನ ಇರುವುದು ಸಹಜ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಯಲ್ಲಾಪುರ ವಿಧಾನಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ, ಯಲ್ಲಾಪುರಕ್ಕೆ ಬಂದಿದ್ದ ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.

ಶಾಸಕರು ರಾಜೀನಾಮೆ ಕೊಟ್ಟದ್ದು ನಾವು ಹೇಳಿದ್ದರಿಂದಲ್ಲ. ಅವರೇ ಪಕ್ಷದಿಂದ ಹೊರ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರದ ಮೇಲೆ ಬೇಸರಗೊಂಡು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ರಾಜೀನಾಮೆ ನೀಡಿದ್ದರು. ಈಗ ನಮ್ಮ ಪಕ್ಷಕ್ಕೆ ಬಂದವರಿಗೆ ಟಿಕೆಟ್ ಕೊಟ್ಟಿದ್ದೇವೆ' ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಉಪಚುನಾವಣೆಗೆ ರಣ ಕಹಳೆ: ಬಿಜೆಪಿಗೆ ಬಂಡಾಯದ ಬಿಸಿ, ಪ್ರಚಾರಕ್ಕೆ ಜೆಡಿಎಸ್ ಸಜ್ಜು

ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡಲಾಗಿದೆಯಲ್ಲ ಎಂದು ಕೇಳಿದ್ದಕ್ಕೆ, 'ಅನಂತಕುಮಾರ್ ಪರ್ಮನೆಂಟ್ ಸ್ಟಾರ್ ಪ್ರಚಾರಕರು' ಎಂದರು.

'ಅನರ್ಹ ಶಾಸಕರ ಜೊತೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಕ್ಕರೆ ಇದ್ದಂತೆ. ಬಿಜೆಪಿ ಕಾರ್ಯಕರ್ತರು ಹಾಲಿದ್ದಂತೆ. ಇಬ್ಬರು ಬೆರೆಯುತ್ತಾರೆ' ಎಂದು ಹೇಳಿದ್ದರು. 'ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿಲ್ಲ. ಪಕ್ಷ ಅವರನ್ನು ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡಿದೆ. ಸಿ.ಎಂ ಮಾಡಿದೆ' ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು