ಕೈ ಪಾಲಿಗೆ ಹಾನಗಲ್‌ ಪುರಸಭೆ; ಮುಂಡಗೋಡು, ಮಹಾಲಿಂಗಪುರದಲ್ಲಿ ಬಿಜೆಪಿ

7
ಗುಬ್ಬಿಯಲ್ಲಿ ಜೆಡಿಎಸ್‌

ಕೈ ಪಾಲಿಗೆ ಹಾನಗಲ್‌ ಪುರಸಭೆ; ಮುಂಡಗೋಡು, ಮಹಾಲಿಂಗಪುರದಲ್ಲಿ ಬಿಜೆಪಿ

Published:
Updated:

ಹಾವೇರಿ: ಬಿಜೆಪಿ ಹಿಡಿತದಲ್ಲಿದ್ದ ಹಾವೇರಿ ಜಿಲ್ಲೆಯ ಹಾನಗಲ್ ಪುರಸಭೆಯಲ್ಲಿ ಕೈ ಮೇಲುಗೈ ಪಡೆದಿದೆ.  ಶಾಸಕ ಸಿ.ಎಂ.ಉದಾಸಿ ಹಾಗೂ ಸಂಸದ ಶಿವಕುಮಾರ ಉದಾಸಿಗೆ ರಾಜಕೀಯವಾಗಿ ತೀರ ಹಿನ್ನಡೆ ಉಂಟಾಗಿದೆ.

ಹಾವೇರಿ ಜಿಲ್ಲೆಯ ಹಾನಗಲ್ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್  19, ಬಿಜೆಪಿ 4 ರಲ್ಲಿ ಗೆಲುವು ಸಾಧಿಸಿದೆ. 

ಕಾಂಗ್ರೆಸ್ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಜೋಡಿ ಗೆಲುವಿನ ನಗೆ ಬೀರಿದರು. 

ಮುಂಡಗೋಡ (ಉತ್ತರ ಕನ್ನಡ): ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ  ಬಿಜೆಪಿ 10 ಸ್ಥಾನಗಳಲ್ಲಿ ಜಯಗಳಿಸಿ ಬಹುಮತ ಗಳಿಸಿದೆ. 

ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಪ.ಪಂ.ಮಾಜಿ ಅಧ್ಯಕ್ಷ, ಬಿಜೆಪಿ ಅಭ್ಯರ್ಥಿ  ಫಣಿರಾಜ ಹದಳಗಿ ವಾರ್ಡ್ ನಂ.14ರಲ್ಲಿ ಕೇವಲ ಒಂದು ಮತದಿಂದ ವಿಜೇತರಾಗಿದ್ದಾರೆ. ವಾರ್ಡ್ ನಂ.10ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಸಾನು ಕೇವಲ ಒಂದು ಮತದಿಂದ ಗೆದ್ದಿದ್ದಾರೆ. ವಾರ್ಡ್ ನಂ.18ರಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ವರಿ ಅಂಡಗಿ ಕೇವಲ 7 ಮತಗಳಿಂದ ವಿಜೇತರಾಗಿದ್ದಾರೆ. ಒಟ್ಟು 19 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಗುಬ್ಬಿ: ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜೆಡಿಎಸ್ 10, ಬಿಜೆಪಿ 6, ಕಾಂಗ್ರೆಸ್ 2, ಪಕ್ಷೇತರ 1 ಸ್ಥಾನ ಪಡೆದಿದೆ. 

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಪ್ರಾಬಲ್ಯ ಸಾಧಿಸಿದೆ. 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 14, ಕಾಂಗ್ರೆಸ್‌ 9 ವಾರ್ಡ್‌ಗಳಲ್ಲಿ ಜಯಗಳಿಸಿದೆ. 
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !