ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ನಾಳೆ

7
ಶೇ 67.51 ಮತದಾನ

ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ನಾಳೆ

Published:
Updated:

ಬೆಂಗಳೂರು: 29 ನಗರಸಭೆಗಳು, 53 ಪುರಸಭೆಗಳು ಮತ್ತು 20 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 102 ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 67.51ರಷ್ಟು ಮತದಾನ ಆಗಿದೆ.

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಶೇ 58.47 ಮತದಾನ ಆಗಿದೆ. ವಿವಿಧ ಜಿಲ್ಲೆಗಳಲ್ಲಿರುವ ಒಟ್ಟು 2,633 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು.

ಸ್ಥಳೀಯ ಸಂಸ್ಥೆಗಳಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಮಹಾನಗರಪಾಲಿಕೆಗಳಿಗೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ (ಸೆ. 3) ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ವಿವಿಧ ನಗರಸಭೆಗಳ 12 ವಾರ್ಡ್‌ಗಳಿಂದ ಮತ್ತು ಪುರಸಭೆಗಳ 18 ವಾರ್ಡ್‌ಗಳಿಂದ ಒಟ್ಟು 30 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ 45 ವಾರ್ಡ್‌ಗಳ ಚುನಾವಣೆ ಮುಂದೂಡಲಾಗಿದೆ. ಕಲಬುರ್ಗಿ ಜಿಲ್ಲೆಯ ಅಫಜಲ್‌ಪುರ ಪುರಸಭೆಯ ವಾರ್ಡ್‌ ಸಂಖ್ಯೆ 19ರಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಆ ವಾರ್ಡ್‌ಗೆ ಚುನಾವಣೆ ನಡೆದಿಲ್ಲ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪುರಸಭೆಯ ವಾರ್ಡ್‌ ಸಂಖ್ಯೆ 9ರ ಬಿಎಸ್‌ಪಿ ಅಭ್ಯರ್ಥಿ ನಿಧನರಾಗಿದ್ದರಿಂದ ಆ ವಾರ್ಡ್‌ ಚುನಾವಣೆಯನ್ನೂ  ರದ್ದುಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !