ಶನಿವಾರ, ಫೆಬ್ರವರಿ 22, 2020
19 °C

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿಗೆ ಬಲ,‘ಕೈ’ಗೆ ಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಶಕ್ತಿ ವರ್ಧನೆಗೊಂಡಿದೆ. ಕಾಂಗ್ರೆಸ್‌ಗೆ ಸಮಾಧಾನಕರ ಫಲಿತಾಂಶ ದೊರೆತಿದೆ.

ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್‌ನಿಂದ ಬಿಜೆಪಿ ತೆಕ್ಕೆಗೆ ಬಂದಿದ್ದರೆ, ದಾವಣಗೆರೆ ಪಾಲಿಕೆಯಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 6 ನಗರಸಭೆಗಳ ಪೈಕಿ 3 ಕಾಂಗ್ರೆಸ್‌ ಪಾಲಾಗಿದ್ದು, ಮೂರರಲ್ಲಿ ಅತಂತ್ರ ಸ್ಥಿತಿ ಇದೆ.

3 ಪುರಸಭೆ ಪೈಕಿ ತಲಾ ಒಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಹಾಗೂ ಒಂದರಲ್ಲಿ ಅತಂತ್ರ ಸ್ಥಿತಿ ಇದೆ. 3 ಪಟ್ಟಣ ಪಂಚಾಯಿತಿಗಳಲ್ಲಿ ಎರಡರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮದುವೆಯ ದಿನವೇ ಸೋಲು
ಕಂಪ್ಲಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ 8ನೇ ವಾರ್ಡಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಲ್‌.ರಾಜೇಶ್‌ ಅವರಿಗೆ ತಮ್ಮ ಮದುವೆಯ ದಿನವೇ ಸೋಲಿನ ಫಲಿತಾಂಶ ದೊರಕಿದೆ. ಪಟ್ಟಣದಲ್ಲಿ ಗುರುವಾರ ಅವರ ಮದುವೆ ಏರ್ಪಾಡಾಗಿತ್ತು. ಬಿಜೆಪಿಯ ಸುದರ್ಶನ ರೆಡ್ಡಿ ವಿರುದ್ಧ ಅವರು ಕೇವಲ 11 ಮತಗಳ ಅಂತರದಿಂದ ಸೋತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು