ಪ್ರಧಾನಿ ವಿರುದ್ಧ ಅವಹೇಳನಕಾರಿ ಪದ ಬಳಕೆ

7

ಪ್ರಧಾನಿ ವಿರುದ್ಧ ಅವಹೇಳನಕಾರಿ ಪದ ಬಳಕೆ

Published:
Updated:

ಕಲಬುರ್ಗಿ: ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಧರಣಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರು ಕೆಲ ಅವಹೇಳಕನಕಾರಿ ಪದ ಬಳಸಿ ಪ್ರಧಾನಿ ಮೋದಿ ಅವರನ್ನು ನಿಂದಿಸಿದರು.

‘ದೇಶದಲ್ಲಿ ರೈತರು, ಕಾರ್ಮಿಕರು ಸಾಲಬಾಧೆಯಿಂದ ಸಾಯುತ್ತಿದ್ದಾರೆ. ಅವರ ಸಾಲ ಮನ್ನಾ ಮಾಡು ಎಂದರೆ ಆಗುವುದಿಲ್ಲ ಎನ್ನುತ್ತಾನೆ. ಆದರೆ, ದೊಡ್ಡದೊಡ್ಡ ಉದ್ಯಮಿಗಳು, ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಾನೆ. ಹೀಗಾದರೆ, ಇವನು ಯಾರಿಗೆ ಹುಟ್ಟಿದ್ದು ಎಂದು ಕೇಳಬೇಕಾಗುತ್ತದೆ’ ಎಂದು ಅವರು ಭಾಷಣದ ಮಧ್ಯೆ ಅವಾಚ್ಯಪದ ಬಳಸಿದರು.

‘ಒಕ್ಕಗಲಿಗರ ಮತ ಪಡೆದು, ಕಂಪನಿಯವರ ಕೆಲಸ ಮಾಡುತ್ತೀಯಾ. ಇಡೀ ಕೇಂದ್ರ ಸರ್ಕಾರ ಹಾಗೂ ನಿಮ್ಮ ಪಕ್ಷ ಕಂಪನಿಯವರ ಬೂಟ್ ನೆಕ್ಕುವ ಕೆಲಸ ಮಾಡುತ್ತಿದೆ’ ಎಂದೂ ಅವರು ದೂರಿದರು.

ದೇಶದ ನಾಗರಿಕರ ವಿರೋಧಿ ಧೋರಣೆ ಹೊಂದಿದ್ದ ಬ್ರಿಟಿಷ್‌ ಸರ್ಕಾರದ ವಿರುದ್ಧ ಆಗಸ್ಟ್‌ 8ರಂದು ಗಾಂಧೀಜಿ ಅವರು ‘ಕ್ವಿಟ್‌ ಇಂಡಿಯಾ’ ಚಳವಳಿ ಆರಂಭಿಸಿದ್ದರು. ಅದೇ ರೀತಿ, ಧೋರಣೆ ಹೊಂದಿದ ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಭರತ ಬಿಟ್ಟು ತೊಲಗಬೇಕು’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುರವಾರ ಈ ಚಳವಳಿ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !